‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ

‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ

ಮದನ್​ ಕುಮಾರ್​
|

Updated on: Jan 27, 2025 | 7:59 PM

‘ನಾನು ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ನನ್ನ ಬಗ್ಗೆ ಏನೋ ಸುದ್ದಿ ಹರಡಿದೆ ಎಂಬುದು ನನಗೆ ಗೊತ್ತಿರಲಿಲ್ಲ. ವಿಷಯಕ್ಕೆ ಸ್ಪಷ್ಟನೆ ಬೇಕು ಎಂದರೆ ನಾನು ಕೊಡುತ್ತೇನೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ. ಬೇರೆ ರೀತಿ ಪ್ರಚಾರ ಮಾಡುವುದು ಬೇಡ’ ಎಂದು ರಜತ್ ಅವರು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.

ರಜತ್ ಅವರು ಬಿಗ್ ಬಾಸ್ ಶೋನಲ್ಲಿ 2ನೇ ರನ್ನರ್​ ಆಪ್​ ಆಗಿದ್ದಾರೆ. ಅವರು ಬಿಗ್ ಬಾಸ್​ ಮನೆಯಲ್ಲಿ ಇದ್ದಾಗ ಹೊರಗಡೆ ಕೆಲವು ಸುದ್ದಿಗಳು ಕೇಳಿಬಂದಿದ್ದವು. ಮಾಜಿ ಗೆಳತಿಯ ಕಿರಿಕ್ ಬಗ್ಗೆ ವಿಷಯ ಹಬ್ಬಿತ್ತು. ಈ ಕುರಿತು ಈಗ ಅವರು ಸ್ಪಷ್ಟನೆ ನೀಡಿದ್ದಾರೆ. ‘ಏನೇ ಇದ್ದರೂ ನನ್ನ ಬಳಿ ಸ್ಪಷ್ಟನೆ ಕೇಳಿ. ಯಾಕೆಂದರೆ ನನಗೂ ಫ್ಯಾಮಿಲಿ ಇದೆ’ ಎಂದು ರಜತ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.