Lok Sabha Polls: ಕುಟುಂಬ ಸಮೇತರಾಗಿ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
Lok Sabha Polls: ಯತ್ನಾಳ್ ಹಾಗೂ ಅವರ ಪತ್ನಿ ಮತ ಚಲಾಯಿಸಿದ ಬಳಿಕ ತಮ್ಮ ಬೆರಳಿಗೆ ಹಚ್ಚಿದ ಇಂಕ್ ಮಾರ್ಕ್ ಅನ್ನು ಮಾಧ್ಯಮದ ಕೆಮೆರಾಗಳಿಗೆ ತೋರಿಸಿದರು. ಯಾರೋ ಒಬ್ಬ ಪತ್ರಕರ್ತರು, ಸಾರ್ ಇದು ಪ್ರಚಾರ ಅನಿಸಲ್ವಾ? ಅಂತ ನಗೆಯಾಡಿದರು. ಅದಕ್ಕೆ ಶಾಸಕರು ಗಂಭೀರವಾಗಿ, ವೋಟು ಹಾಕಿದ್ದನ್ನು ತೋರಿಸುತ್ತಿದ್ದೇನೆ, ಅಷ್ಟೇ, ಎಂದರು.
ವಿಜಯಪುರ: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಎರಡನೇ ಹಂತದ ಮತದಾನದ ಭಾಗವಾಗಿ ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ (Vijayapura LS constituency) ಬಿರುಸಿನಿಂದ ವೋಟಿಂಗ್ ನಡೆಯುತ್ತಿದೆ. ಮಧ್ಯಾಹ್ನದ ಸುಡು ಬಿಸಿಲಲ್ಲಿ ನಿಂತು ಕುದ್ದು ಹೋಗುವುಮನ್ನು ತಪ್ಪಿಸಲು ಮತದಾರರು ಬೆಳಗಿನ ಸಮಯದಲ್ಲೇ ತಮ್ಮ ಮತ ಚಲಾಯಿಸಿ ಮನೆ ಸೇರುವ ಇರಾದೆಯಿಂದ ಮನೆಗಳಿಂದ ಹೊರಬಂದು ಸಾಲುಗಳಲ್ಲಿ ನಿಲ್ಲುತ್ತಿದ್ದಾರೆ. ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ತಮ್ಮ ಕುಟುಂಬ ಜೊತೆ ನಗರದ ಎಸ್ ಎಸ್ ಶಾಲೆ ಮತಗಟ್ಟೆಗೆ (polling booth at SS School) ಬಂದು ಸಾಲಲ್ಲಿ ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಬಹುತೇಕ ಭಾಗಗಳಲ್ಲಿ ಗಣ್ಯರು ತಮ್ಮ ‘ಗಣ್ಯತನ’ ಪ್ರದರ್ಶಿಸದೆ ಜನಸಾಮಾನ್ಯರಂತೆ ಸಾಲಲ್ಲಿ ನಿಂತು ತಮ್ಮ ಸರದಿ ಬಂದಾಗ ಮತ ಚಲಾಯಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಯತ್ನಾಳ್ ಹಾಗೂ ಅವರ ಪತ್ನಿ ಮತ ಚಲಾಯಿಸಿದ ಬಳಿಕ ತಮ್ಮ ಬೆರಳಿಗೆ ಹಚ್ಚಿದ ಇಂಕ್ ಮಾರ್ಕ್ ಅನ್ನು ಮಾಧ್ಯಮದ ಕೆಮೆರಾಗಳಿಗೆ ತೋರಿಸಿದರು. ಯಾರೋ ಒಬ್ಬ ಪತ್ರಕರ್ತರು, ಸಾರ್ ಇದು ಪ್ರಚಾರ ಅನಿಸಲ್ವಾ? ಅಂತ ನಗೆಯಾಡಿದರು. ಅದಕ್ಕೆ ಶಾಸಕರು ಗಂಭೀರವಾಗಿ, ವೋಟು ಹಾಕಿದ್ದನ್ನು ತೋರಿಸುತ್ತಿದ್ದೇನೆ, ಅಷ್ಟೇ, ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರ ಲಿಂಗಾಯತ ವಿರೋಧಿ ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ: ಬಸನಗೌಡ ಪಾಟೀಲ್ ಯತ್ನಾಳ್