ಬಕ್ರೀದ್ ಸಂದರ್ಭದಲ್ಲಿ ಗೋಹತ್ಯೆ ನಡೆದಿವೆ ಎನ್ನುತ್ತಾ ಕೆಡಿಪಿ ಮೀಟಿಂಗ್ ನಲ್ಲಿ ತಮ್ಮ ಫೋನ್ ಬಿಸಾಡಿದ ಶಾಸಕ ಚನ್ನಬಸ್ಸಪ್ಪ
ಚನ್ನಬಸಪ್ಪರನ್ನು ಸಮಾಧಾನಪಡಿಸಿ ಮಾತಾಡುವ ತೀರ್ಥಹಳ್ಳಿ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಅವರು ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಮತ್ತು ತೀರ್ಥಹಳ್ಳಿಯಲ್ಲಿ ಗೋ ತ್ಯಾಜ್ಯ ಪತ್ತೆಯಾಗಿದೆ, ತಾವು ಗೃಹ ಸಚಿವರಾಗಿದ್ದಾಗಲೂ ಗೋಹತ್ಯೆ ಅಕ್ರಮವಾಗಿ ನಡೆಯುತ್ತಿತ್ತು, ಪೊಲೀಸರು ಹೆಚ್ಚಿನ ಎಚ್ಚರವಹಿಸಬೇಕಾದ ಅವಶ್ಯಕತೆಯಿದೆ ಎಂದು ಹೇಳಿದರು. ಇವರೆಲ್ಲ ಮಾತಾಡುವಾಗ ಒಮ್ಮೆಯೂ ಸಚಿವ ಮಧು ಬಂಗಾರಪ್ಪ ಮುಖ ಕಾಣಿಸುವುದಿಲ್ಲ.
ಶಿವಮೊಗ್ಗ: ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ನಡೆಸಿದ ಕೆಡಿಪಿ ಸಭೆಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು ಅಕ್ರಮ ಗೋ ಹತ್ಯೆ ವಿಷಯದ ಮೇಲೆ ಜೋರು ಚರ್ಚೆ ನಡೆಯಿತು. ಗೋ ಹತ್ಯೆ ನಿಷೇಧ ಕಾನೂನು ರಾಜ್ಯದಲ್ಲಿ ಜಾರಿಯಲ್ಲಿದ್ದರೂ ಶಿವಮೊಗ್ಗ ಪೊಲೀಸ್ ವ್ವವಸ್ಥೆ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿದೆ, ಗೋಹತ್ಯೆ ನಡೆಸಿದವರ ವಿರುದ್ಧ ದೂರು ದಾಖಲಿಸಿದರೂ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಅವರ ಕೆಳಹಂತದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಳ್ಳುವುದಿಲ್ಲ ಎಂದು ಶಿವಮೊಗ್ಗ ಬಿಜೆಪಿ ಶಾಸಕ ಚನ್ನಬಸಪ್ಪ ಕೋಪದಲ್ಲಿ ಹೇಳಿದರು. ಗೋಹತ್ಯೆಯ ನಡೆದ ವಿಡಿಯೋಗಳು ಅವರ ಮೊಬೈಲ್ ನಲ್ಲಿದ್ದವು. ಈ ಹಂತದಲ್ಲಿ ಎದ್ದು ನಿಂತು ಮಾತಾಡಿದ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯೆ ಬಿಲ್ಕಿಸ್ ಬಾನು ಜಿಲ್ಲೆಯಲ್ಲಿ ಗೋಹತ್ಯೆ ಎಲ್ಲೂ ನಡೆದಿಲ್ಲ ಬಕ್ರೀದ್ ಸಂದರ್ಭದಲ್ಲಿ ಕೇವಲ ಕುರಿಗಳನ್ನು ಬಲಿ ನೀಡಲಾಗಿದೆ ಎಂದು ಹೇಳುತ್ತಾರೆ. ಆಗ ಮತ್ತಷ್ಟು ರೊಚ್ಚಿಗೇಳುವ ಚನ್ನಬಸಪ್ಪ ವಿಡಿಯೋಗಳನ್ನು ತೋರಿಸುತ್ತಾ ಗೋವುಗಳು ಬಿಲ್ಕಿಸ್ ಬಾನು ಅವರಿಗೆ ಕುರಿಗಳ ಹಾಗೆ ಕಾಣುತ್ತವೆಯೇ ಅಂತ ಕೋಪದಲ್ಲಿ ಹೇಳುತ್ತಾ ತಮ್ಮ ಮೊಬೈಲನ್ನು ನೆಲಕ್ಕೆ ಬಿಸಾಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದರೂ ಹೆಚ್ಚುತ್ತಿಲ್ಲ ಜಾನುವಾರು ಸಂಖ್ಯೆ; ಕಳೆದ 10 ವರ್ಷದಿಂದ ಇಳಿಕೆಯತ್ತ ಸಾಗಿದ ಗೋ ಸಂತತಿ