Chikkaballapur: ಸಿಂಗಲ್-ಪೇರೆಂಟ್ ಮಹಿಳೆಯ ಮಗಳಿಗೆ ಸ್ಕಾಲರ್ ಶಿಪ್, ಶಿಕ್ಷಣ ಮತ್ತು ನೌಕರಿ ಕೊಡಿಸುವ ಆಶ್ವಾಸನೆ ನೀಡಿದ ಪ್ರದೀಪ್ ಈಶ್ವರ್

|

Updated on: May 22, 2023 | 11:42 AM

ಅಲ್ಲಿಂದ ಹೊರಡುವ ಮೊದಲು ಬಾಲಕಿಗೆ ಚೆನ್ನಾಗಿ ಓದಿ ಅಮ್ಮನಿಗೆ ಹೆಸರು ತರಬೇಕು ಅಂತಲೂ ಪ್ರದೀಪ್ ಈಶ್ವರ್ ಹೇಳುತ್ತಾರೆ.

ಚಿಕ್ಕಬಳ್ಳಾಪುರ: ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಪ್ರದೀಪ್ ಈಶ್ವರ್ (Pradeep Eshwar) ಕ್ಷೇತ್ರದಲ್ಲಿ ಸುತ್ತುತ್ತಾ ಜನರ ಕಷ್ಟ ಸುಖ ವಿಚಾರಿಸುವುದನ್ನು ಮುಂದುವರಿಸಿದ್ದಾರೆ. ಇಲ್ಲೊಬ್ಬ ಸಿಂಗಲ್ ಪೇರೆಂಟ್ (single-parent) ಮಹಿಳೆಯನ್ನು ಅವರು ಮಾತಾಡಿಸುವ ಮೊದಲು ಅವರ ಕಾಲು ಮುಟ್ಟಿ ನಮಸ್ಕರಿಸುತ್ತಾರೆ. ಹಾಗೆ ಮಾಡುವಾಗ ವೋಟು ಕೇಳಲು ಬಂದಿಲ್ಲ, ಆಶೀರ್ವಾದ ಪಡೆಯಲು ಬಂದಿದ್ದೇನೆ ಅಂತ ತೆಲುಗು ಭಾಷೆಯಲ್ಲಿ ಹೇಳುತ್ತಾರೆ. ಶಾಲೆಯೊಂದರಲ್ಲಿ ಓದುತ್ತಿರುವ ಮಹಿಳೆಯ ಮಗಳಿಗೆ ಸ್ಕಾಲರ್ ಶಿಪ್ (scholarship) ಕೊಡಿಸುವ ಭರವಸೆ ನೀಡುತ್ತಾರಲ್ಲದೆ ಆಕೆಯ ಶಿಕ್ಷಣದ (education) ಜವಾಬ್ದಾರಿಯನ್ನು ಹೊತ್ತುಕೊಳ್ಳುವುದಾಗಿ ಹೇಳುತ್ತಾರೆ. ಬಳಿಕ ಮಹಿಳೆಯ ಕಡೆ ತಿರುಗಿ ಮಗಳಿಗೆ ನೌಕರಿ (job) ಕೊಡಿಸುವ ಜವಾಬ್ದಾರಿ ತನ್ನದು ಎನ್ನುತ್ತಾರೆ. ಅಲ್ಲಿಂದ ಹೊರಡುವ ಮೊದಲು ಬಾಲಕಿಗೆ ಚೆನ್ನಾಗಿ ಓದಿ ಅಮ್ಮನಿಗೆ ಹೆಸರು ತರಬೇಕು ಅಂತಲೂ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: May 22, 2023 11:42 AM