ಸಿದ್ದರಾಮಯ್ಯ ಕಾಲೆಳೆಯುತ್ತ ಗುಣಗಾನ ಮಾಡಿ ಅನುದಾನ ಯಾಚಿಸಿದ ಮುನಿರತ್ನ ನಾಯ್ಡು!
ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಬಳಿಕ ಮುನಿರತ್ನ ತಮ್ಮ ಕ್ಷೇತ್ರದಲ್ಲಿ ಕುಂಠಿತಗೊಂಡಿರುವ ಅಭಿವೃದ್ಧಿ ಕಾಮಗಾರಿ ಮತ್ತು ಮುಚ್ಚಿ ಹೋಗಿರುವ ಶಾಲೆಗಳ ಬಗ್ಗೆ ಮುಖ್ಯಮಂತ್ರಿಯ ಗಮನ ಸೆಳೆದು, ಪರೋಕ್ಷವಾಗಿ ಅನುದಾನ ಬಿಡುಗಡೆ ಮಾಡಿ ಅಂತ ಮನವಿ ಮಾಡುತ್ತಾರೆ. ಮುನಿರತ್ನ ನಿಸ್ಸಂದೇಹವಾಗಿ ಒಬ್ಬ ಚಾಣಾಕ್ಷ ರಾಜಕಾರಣಿ ಅಂತ ನಿಮಗನಿಸುತ್ತಿಲ್ಲವೇ?
ಬೆಂಗಳೂರು: ನಗರದ ರಾಜರಾಜೇಶ್ವರಿ ನಗರದಲ್ಲಿ ಇಂದು ನಡೆದ ಬಾಬು ಜಗಜೀವನ್ ರಾಮ್ ಭವನ ಉದ್ಘಾಟನಾ ಸಮಾರಂಭದಲ್ಲಿ ಸ್ದಳೀಯ ಶಾಸಕ ಮುನಿರತ್ನ ನಾಯ್ಡು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲೆಳೆಯುತ್ತಲೇ ಅವರ ಗುಣಗಾನ ಮಾಡಿದರು. ರಾಜ್ಯ ಸರ್ಕಾರವನನ್ನು ಗೊಂದಲಕ್ಕೆ ದೂಡುವ ಕೆಲಸ ಬಿಜೆಪಿ ಮಾಡುತ್ತಿಲ್ಲ, 5 ವರ್ಷಗಳ ಕಾಲ ವಿರೋಧ ಪಕ್ಷವಾಗಿ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ ಅದರಲ್ಲೇನೂ ಅನುಮಾನ ಬೇಡ, ಆದರೆ ನಿಮ್ಮ ಪಕ್ಷದವರೇ ಕಿತಾಪತಿ ನಡೆಸಿದರೆ ನಮ್ಮನ್ನು ದೂರಬೇಡಿ ಅಂತ ಅವರು ಹೇಳಿದಾಗ ಸಭಿಕರು ಹೋಯ್ ಅಂತ ಅರಚುತ್ತಾರೆ. ಶಾಸಕ ಶ್ರೀನಿವಾಸ್, ಮುನಿರತ್ನರ ಭಾಷಣ ನಿಲ್ಲಿಸಲೇ ಅಂತ ಸಿದ್ದರಾಮಯ್ಯರ ಅನುಮತಿ ಕೇಳುತ್ತಾರೆ. ಮುನಿರತ್ನರ ಮಾತುಗಳನ್ನು ನಗುತ್ತ ಎಂಜಾಯ್ ಮಾಡುತ್ತಿದ್ದ ಸಿದ್ದರಾಮಯ್ಯ, ಮಾತಾಡಲಿ ಬಿಡಿ ಮಾತಾಡಲಿ ಅನ್ನುತ್ತಾರೆ!
ನಂತರ ಮುನಿರತ್ನ ಇಲ್ಲಿರುವ ನಿಮಗೆಲ್ಲ ಸಿದ್ದರಾಮಣ್ಣನ ಮೇಲಿರುವ ಅಭಿಮಾನ ಮತ್ತು ಪ್ರೀತಿಗಿಂತ ದುಪ್ಪಟ್ಟು ಗೌರವಾದರಗಳು ನನಗಿವೆ, ಅವರೊಂದಿಗೆ 5 ವರ್ಷ ಕೆಲಸ ಮಾಡಿದ್ದೇನೆ, ಆ ಅವಧಿಯಲ್ಲಿ ಅವರು ನನಗೆ ನೀಡಿರುವಷ್ಟು ಪ್ರೋತ್ಸಾಹ ಬೇರೆ ಯಾರೂ ನೀಡಿಲ್ಲ, ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಪೂರ್ವ ಜನ್ಮದ ಪುಣ್ಯ ಅಂತ ಭಾವಿಸುತ್ತೇನೆ. ಅವರು ಈಗಲೂ ನನಗೆ ಒಳ್ಳೆಯದಾಗಲಿ ಅಂತಲೇ ಹಾರೈಸುತ್ತಾರೆ ಎಂದು ಹೇಳಿದಾಗ ಸಭಿಕರಿಂದ ಚಪ್ಪಾಳೆ, ಶಿಳ್ಳೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕನಕಪುರಕ್ಕೆ ಸೀಮಿತವಾಗಿದ್ದ ಸಹೋದರರ ಗೂಂಡಾಗಿರಿ ಈಗ ಆರ್ ಆರ್ ನಗರದವರೆಗೆ ವಿಸ್ತರಿಸಿದೆ: ಮುನಿರತ್ನ ನಾಯ್ಡು
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್ನ್ಯೂಸ್: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ

