ಮುಕೇಶ್ ಅಂಬಾನಿ ದಂಪತಿ ಪುತ್ರನ ಮದುವೆ ಸಮಾರಂಭ: ಡಿಕೆ ಶಿವಕುಮಾರ್​ ಭಾಗಿ

ಮುಕೇಶ್ ಅಂಬಾನಿ ದಂಪತಿ ಪುತ್ರನ ಮದುವೆ ಸಮಾರಂಭ: ಡಿಕೆ ಶಿವಕುಮಾರ್​ ಭಾಗಿ

ಗಂಗಾಧರ​ ಬ. ಸಾಬೋಜಿ
|

Updated on:Jul 13, 2024 | 11:03 PM

ಅನಂತ್​ ಅಂಬಾನಿ, ರಾಧಿಕ ವಿವಾಹಕ್ಕಾಗಿ ಸ್ವರ್ಗವೇ ನಾಚುವಂತಹ ಅದ್ಧೂರಿ ವೇದಿಕೆ ಸಿದ್ಧವಾಗಿದೆ. ಕುಬೇರನ ಪುತ್ರನ ಕಲ್ಯಾಣಕ್ಕೆ ಎಲ್ಲಾ ಕ್ಷೇತ್ರದ ಸ್ಟಾರ್​ಗಳು ಸಾಕ್ಷಿಯಾಗಿದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಡಿಸಿಎಂ ಡಿಕೆ ಶಿವಕುಮಾರ್ ಕೂಡ ಮದುವೆಯಲ್ಲಿ ಭಾಗಿ ಆಗಿದ್ದಾರೆ. ​

ಮುಂಬೈ, ಜುಲೈ 13: ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ದಂಪತಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಮದುವೆ ಕಾರ್ಯಕ್ರಮ ಮುಂಬೈನ ವರ್ಲ್ಡ್​ ಜಿಯೋ ಸೆಂಟರ್​​ನಲ್ಲಿ ಅದ್ಧೂರಿಯಾಗಿ ನೆರವೇರುತ್ತಿದೆ. ಇಂದು ಶುಭ ಆಶೀರ್ವಾದ ಸಮಾರಂಭ ನಡೆದಿದ್ದು, ಡಿಸಿಎಂ ಡಿಕೆ ಶಿವಕುಮಾರ್ (DK Shivakumar)​ ಭಾಗಿ ಆಗಿದ್ದಾರೆ. ಸದ್ಯ ಡಿಕೆ ಶಿವಕುಮಾರ್​ ಭಾಗಿಯಾಗಿರುವ ಫೋಟೋಗಳು ವೈರಲ್ ಆಗಿವೆ. ಮುಕೇಶ್ ಅಂಬಾನಿ ದಂಪತಿ ಪುತ್ರನ ಮದುವೆಗೆ ಸಿಎಂ ಸಿದ್ದರಾಮಯ್ಯ ಆಹ್ವಾನ ನೀಡಲಾಗಿತ್ತು ಎಂದು ಈ ಹಿಂದು ಸುದ್ದಿ ಹರಿದಾಡಿತ್ತು. ಬಳಿಕ ಅಧಿಕೃತವಾಗಿ ಯಾವುದೇ ಆಹ್ವಾನ ಬಂದಿಲ್ಲ ಎಂದು ತಿಳಿಸಿದ್ದರು. ಮದುವೆಯಲ್ಲಿ ಸಾಕಷ್ಟು ರಾಜಕೀಯ ಗಣ್ಯಾತಿಗಣ್ಯರು ಭಾಗಿಯಾಗಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Published on: Jul 13, 2024 11:03 PM