ಅಪರ್ಣಾ ನಿಧನ: ನಗರ ಜೀವನದ ಕ್ರೂರತೆ ವಿವರಿಸಿದ ನಾಗತಿಹಳ್ಳಿ ಚಂದ್ರಶೇಖರ್

ಅಪರ್ಣಾ ನಿಧನ: ನಗರ ಜೀವನದ ಕ್ರೂರತೆ ವಿವರಿಸಿದ ನಾಗತಿಹಳ್ಳಿ ಚಂದ್ರಶೇಖರ್

ಮಂಜುನಾಥ ಸಿ.
|

Updated on:Jul 13, 2024 | 9:15 PM

ಪ್ರಖ್ಯಾತ ನಿರೂಪಕಿ, ನಟಿ ಅಪರ್ಣಾ ಇತ್ತೀಚೆಗಷ್ಟೆ ನಿಧನರಾಗಿದ್ದಾರೆ. ಕಳೆದ ಎರಡು ವರ್ಷದಿಂದ ಅವರು ಶ್ವಾಸಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಅಪರ್ಣಾರ ಮನೆಗೆ ಹತ್ತಿರದಲ್ಲೇ ಇದ್ದ ನಾಗತಿಹಳ್ಳಿ ಚಂದ್ರಶೇಖರ್, ಅಪರ್ಣಾರ ಸಾವಿನ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಗರ ಜೀವನದ ಕ್ರೂರತೆಯನ್ನು ವಿವರಿಸಿದ್ದಾರೆ.

ಅಪರ್ಣಾ ನಿಧನರಾಗಿದ್ದಾರೆ. ಅವರ ಮನೆಯಿಂದ ತುಸು ದೂರದಲ್ಲೇ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಮನೆಯಿದೆ. ಅಪರ್ಣಾ ಅವರು ನಾಗತಿಹಳ್ಳಿ ಅವರಿಗೆ ಹಳೆಯ ಪರಿಚಯ. ಅಪರ್ಣಾ ಶ್ವಾಸಕೋಶದ ಕ್ಯಾನ್ಸರ್​​ ನೊಂದಿಗೆ ಕಳೆದ ಎರಡು ವರ್ಷದಿಂದಲೂ ಸೆಣೆಸಾಡಿ ಕೊನೆಗೆ ಜೀವ ಬಿಟ್ಟಿದ್ದಾರೆ. ಆದರೆ ಅಪರ್ಣಾ ನಿಧನರಾದ ದಿನದ ವರೆಗೂ ಪಕ್ಕದಲ್ಲೇ ಇದ್ದ ನಾಗತಿಹಳ್ಳಿಗೆ ಅಪರ್ಣಾರ ನೋವು ತಿಳಿದಿರಲಿಲ್ಲ. ಟಿವಿ9 ಜೊತೆಗೆ ಅಪರ್ಣಾ ನಿಧನದ ಬಗ್ಗೆ ಮಾತನಾಡಿರುವ ನಾಗತಿಹಳ್ಳಿ ಚಂದ್ರಶೇಖರ್, ನಗರ ಜೀವನ ಅದೆಷ್ಟು ಕ್ರೂರ ಎಂಬುದಕ್ಕೆ ಇದನ್ನು ಉದಾಹರಣೆಯಾಗಿ ನೀಡಿದ್ದಾರೆ. ನಮ್ಮ ಅಕ್ಕ-ಪಕ್ಕದವರ ಬಗೆಗೂ ತಿಳಿಯದಷ್ಟು ನಾವು ಪರಸ್ಪರ ದೂರಾಗಿಬಿಟ್ಟಿದ್ದೇವೆ ಎಂದು ನಾಗತಿಹಳ್ಳಿ ಅವರು ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 13, 2024 09:10 PM