‘ಜನರ ಕೋರಿಕೆ ಮೇಲೆ ಹಂಪ್ ಹಾಕಲಾಗಿತ್ತು’; ಸುನೇತ್ರಾ ಅಪಘಾತದ ಬಗ್ಗೆ ಶಾಸಕ ರವಿ ಸುಬ್ರಮಣ್ಯ ಮಾತು
ಅವೈಜ್ಞಾನಿಕ ಹಂಪ್ ಮತ್ತು ರಸ್ತೆ ಗುಂಡಿ ಕಾರಣದಿಂದ ಆ್ಯಕ್ಸಿಡೆಂಟ್ ಆಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಆ ಕ್ಷೇತ್ರದ ಶಾಸಕ ರವಿ ಸುಬ್ರಮಣ್ಯ ಮಾತನಾಡಿದ್ದಾರೆ.
ಕಿರುತೆರೆ ನಟಿ ಸುನೇತ್ರಾ ಪಂಡಿತ್ ಅವರು (Sunetra Pandit) ಶನಿವಾರ (ಮೇ 7) ಅಪಘಾತಕ್ಕೆ ಒಳಗಾದರು. ಬೆಂಗಳೂರಿನ (Bengaluru) ಎನ್.ಆರ್. ಕಾಲೋನಿಯ 9ನೇ ಅಡ್ಡರಸ್ತೆಯಲ್ಲಿ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಅವರು ಬೈಕ್ ಸಮೇತ ಬಿದ್ದಿದ್ದಾರೆ. ಅವೈಜ್ಞಾನಿಕ ಹಂಪ್ ಮತ್ತು ರಸ್ತೆ ಗುಂಡಿ ಕಾರಣದಿಂದ ಆ್ಯಕ್ಸಿಡೆಂಟ್ (Accident) ಆಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಆ ಕ್ಷೇತ್ರದ ಶಾಸಕ ರವಿ ಸುಬ್ರಮಣ್ಯ ಮಾತನಾಡಿದ್ದಾರೆ. ‘ಎನ್.ಆರ್. ಕಾಲೋನಿ ಹಳೆಯ ಏರಿಯಾಗಳು. ಅಲ್ಲಿನ ರಸ್ತೆಗಳು ಚಿಕ್ಕದಾಗಿವೆ. ಹಂಪ್ ಹಾಕಿದ್ರೆ ಅಪಘಾತ ತಡೆಯಬಹುದು ಎನ್ನುವ ಅಭಿಪ್ರಾಯ ಜನಗಳಲ್ಲಿದೆ. ಆದರೆ, ಅದು ತಪ್ಪು. ಹಂಪ್ಗಳಿಂದ ಅಪಘಾತಗಳು ಸಂಭವಿಸುತ್ತವೆ. ಜನರ ಕೋರಿಕೆ ಮೇಲೆ ಹಂಪ್ ಹಾಕಲಾಗಿದೆ’ ಎಂದು ಹೇಳಿದ್ದಾರೆ ಎಂದಿದ್ದಾರೆ ಅವರು.
Published on: May 08, 2022 08:03 PM