ದಸರಾ ಕಂಬಳಕ್ಕೆ 8 ಕೋಟಿ ಕೊಡೋದಾದ್ರೆ, ಕರಾವಳಿ ಕಂಬಳಕ್ಕೆ 25 ಲಕ್ಷ ಕೊಡಿ: ಸುನೀಲ್​ ಕುಮಾರ್ ಆಗ್ರಹ​

Edited By:

Updated on: Jul 16, 2026 | 2:55 PM

ಮೈಸೂರು ದಸರಾ ಕಂಬಳಕ್ಕೆ 8 ಕೋಟಿ ರೂ. ಖರ್ಚು ಮಾಡುವ ಬದಲು, ದಕ್ಷಿಣ ಕನ್ನಡ ಮತ್ತು ಉಡುಪಿಯ 20ಕ್ಕೂ ಹೆಚ್ಚು ಕರಾವಳಿ ಕಂಬಳಗಳಿಗೆ ತಲಾ 25 ಲಕ್ಷ ರೂ. ಅನುದಾನ ನೀಡುವಂತೆ ಬಿಜೆಪಿ ಶಾಸಕ ಸುನೀಲ್ ಕುಮಾರ್​​​ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಬೆಂಗಳೂರು, ಜುಲೈ 16: ‘‘ನಮ್ಮ ಸರ್ಕಾರದ ಅವಧಿಯಲ್ಲಿ ಕಂಬಳ ನಡೆಸಲು ಅನುದಾನ ನೀಡಿದ್ದರು. ಈಗ ಪ್ರತಿ ಕಂಬಳಕ್ಕೆ 5 ಲಕ್ಷ ರೂ. ಕೊಡಿ ಅಂತಾ ಕೇಳಿದ್ದೇವೆ ಕೊಟ್ಟಿಲ್ಲ. ಯಾವುದೋ ಒಂದು ಕಂಬಳಕ್ಕೆ 8 ಕೋಟಿ ರೂ ಕೊಡೋದಾದರೆ ದಕ್ಷಿಣ ಕನ್ನಡ ಕಂಬಳಕ್ಕೆ 25 ಲಕ್ಷ ರೂ ಕೊಡಿ’’ ಎಂದು ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್​​ ಆಗ್ರಹಿಸಿದ್ದಾರೆ. ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜನೆ ವಿಚಾರವಾಗಿ ಮಾತನಾಡಿದ ಅವರು, ‘‘ದಸರಾದಲ್ಲಿ ಕಂಬಳ ನಡೆಸಬೇಕೋ, ಬೇಡವೋ ಅಂತಾ ಚರ್ಚೆ ಶುರುವಾಗಿದೆ. ಯಾವುದೇ ಉತ್ಸವ ಬೇರೆ ಪ್ರದೇಶಕ್ಕೆ ಹೋಗಲು ಭಿನ್ನಾಭಿಪ್ರಾಯವಿಲ್ಲ. ಕರಾವಳಿ ಕಂಬಳಕ್ಕೆ ಸಾಂಸ್ಕೃತಿಕ ಸೊಗಡು, ಧಾರ್ಮಿಕ ಭಾವನೆ ಇದೆ. ಅದನ್ನು ಬೇರೆಡೆಗೆ ಕೊಂಡೊಯ್ದಾಗ ಅದನ್ನು ಎಲ್ಲರೂ ಸ್ವೀಕರಿಸಬೇಕು. ನಾನೂ ಕೂಡ ಕಂಬಳ ಆಯೋಜಿಸುವ ವ್ಯಕ್ತಿ. ದಸರಾ ಸಮಿತಿ ಕಂಬಳ ಮಾಲೀಕರು, ಅಭಿಮಾನಿಗಳ ಜೊತೆ ಚರ್ಚಿಸಿಲ್ಲ. ಕೇವಲ ಒಬ್ಬರೇ ಕಂಬಳ ಮಾಡುವುದಾಗಿ ತೀರ್ಮಾನ ಸರಿಯಲ್ಲ, ಕಂಬಳ ಮಾಲೀಕರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಬೇಕಿತ್ತು’’ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jul 16, 2026 02:54 PM
Loading...
Unable to load recommendations.
Follow Us
ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More