ಮಳವಳ್ಳಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಮಗುವಿನ ಕುಟುಂಬಕ್ಕೆ ಶಾಸಕ ಜಮೀರ್ ಅಹ್ಮದ್ ಸಾಂತ್ವನ

ಮಳವಳ್ಳಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಮಗುವಿನ ಕುಟುಂಬಕ್ಕೆ ಶಾಸಕ ಜಮೀರ್ ಅಹ್ಮದ್ ಸಾಂತ್ವನ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 19, 2022 | 12:25 PM

ಜಮೀರ್ ಅಹ್ಮದ್ ಬುಧವಾರ ಮಗಳನ್ನು ಕಳೆದುಕೊಂಡು ಕಂಗಾಲಾಗಿರುವ ಕುಟುಂಬದ ಸದಸ್ಯರನ್ನು ಸಂತೈಸಿ ರೂ 5 ಲಕ್ಷ ನೆರವು ನೀಡಿದರು.

ಮಂಡ್ಯ: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ (Zameer Ahmed Khan) ರಾಜಕೀಯವಾಗಿ ಹಲವಾರು ಬಾರಿ ತಮ್ಮ ಪಕ್ಷದ ಹಿರಿಯ ನಾಯಕರಿಂದ ಮತ್ತು ಸಾರ್ವಜನಿಕರಿಂದ ಅವಕೃಪೆಗೊಳಗಾದರೂ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸ್ಪಂದಿಸುವ ದಯಾಳುತನ ಅವರಲ್ಲಿದೆ. ಕುಟುಂಬಗಳಿಗೆ ಖುದ್ದು ಭೇಟಿ ನೀಡಿ, ಸಾಂತ್ವನ ಹೇಳಿ ತಮ್ಮ ಕೈಲಾದ ಧನಸಹಾಯ ಮಾಡುತ್ತಾರೆ. ಮಂಡ್ಯದ ಮಳವಳ್ಳಿಯ (Malavalli) ಬಾಲಕಿಯ ಅತ್ಯಾಚಾರ ಮತ್ತು ಕೊಲೆ (rape and murder) ಪ್ರಕರಣ ಇಡೀ ರಾಜ್ಯವನ್ನೇ ತತ್ತರಿಸುವಂತೆ ಮಾಡಿದೆ. ಜಮೀರ್ ಅಹ್ಮದ್ ಬುಧವಾರ ಮಗಳನ್ನು ಕಳೆದುಕೊಂಡು ಕಂಗಾಲಾಗಿರುವ ಕುಟುಂಬದ ಸದಸ್ಯರನ್ನು ಸಂತೈಸಿ ರೂ 5 ಲಕ್ಷ ನೆರವು ನೀಡಿದರು.