ಎಂಎಲ್‌ಸಿ ಮನೆಯಲ್ಲೇ ಕಾಫಿ ಕದಿಯುತ್ತಿದ್ದಿವನು ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿದ ನೋಡಿ!
ವಿರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳೂರು ಗ್ರಾಮದಲ್ಲಿ ಕಾಫಿ ಕಳ್ಳತನದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಎಂಎಲ್‌ಸಿ ಸುಜಾ ಕುಶಾಲಪ್ಪ ಅವರ ಎಸ್ಟೇಟ್‌ನಲ್ಲಿ ನೌಕರನಾಗಿದ್ದ ಪೊನ್ನಪ್ಪ ಕಾಫಿ ಕದ್ದಿರುವುದು ಪತ್ತೆಯಾಗಿದೆ. ಶಾಸಕರ ಮನೆಯಲ್ಲೇ ನಡೆದ ಈ ಪ್ರಕರಣದಲ್ಲಿ, ಪೊನ್ನಪ್ಪನನ್ನು ಸುಜಾ ಕುಶಾಲಪ್ಪ ಅವರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಕಾಫಿಯನ್ನು ಕದ್ದಿದ್ದಾಗಿ ಆರೋಪಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ತಿಂಗಳ ಹಿಂದೆ ನಡೆದ ಈ ಘಟನೆ ಇದೀಗ ಬಹಿರಂಗವಾಗಿದ್ದು, ತಪ್ಪೊಪ್ಪಿಗೆ ಹಿನ್ನೆಲೆ ಸುಜಾ ಕುಶಾಲಪ್ಪ ಅವರು ಪ್ರಕರಣ ದಾಖಲಿಸದೆ ಮಾನವೀಯತೆ ದೃಷ್ಟಿಯಿಂದ ಕ್ಷಮೆ ನೀಡಿದ್ದಾರೆ.
ಮಡಿಕೇರಿ, ಏಪ್ರಿಲ್ 04: ವಿರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳೂರು ಗ್ರಾಮದಲ್ಲಿ ಕಾಫಿ ಕಳ್ಳತನದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಎಂಎಲ್‌ಸಿ ಸುಜಾ ಕುಶಾಲಪ್ಪ ಅವರ ಎಸ್ಟೇಟ್‌ನಲ್ಲಿ ನೌಕರನಾಗಿದ್ದ ಪೊನ್ನಪ್ಪ ಕಾಫಿ ಕದ್ದಿರುವುದು ಪತ್ತೆಯಾಗಿದೆ. ಎಂಎಲ್‌ಸಿ ಮನೆಯಲ್ಲೇ ನಡೆದ ಈ ಪ್ರಕರಣದಲ್ಲಿ, ಪೊನ್ನಪ್ಪನನ್ನು ಸುಜಾ ಕುಶಾಲಪ್ಪ ಅವರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಕಾಫಿಯನ್ನು ಕದ್ದಿದ್ದಾಗಿ ಆರೋಪಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ತಿಂಗಳ ಹಿಂದೆ ನಡೆದ ಈ ಘಟನೆ ಇದೀಗ ಬಹಿರಂಗವಾಗಿದ್ದು, ತಪ್ಪೊಪ್ಪಿಗೆ ಹಿನ್ನೆಲೆ ಸುಜಾ ಕುಶಾಲಪ್ಪ ಅವರು ಪ್ರಕರಣ ದಾಖಲಿಸದೆ ಮಾನವೀಯತೆ ದೃಷ್ಟಿಯಿಂದ ಕ್ಷಮೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Apr 04, 2026 10:59 AM
Follow Us