ಪೊಲೀಸ್ ಅಧಿಕಾರಿಯ ಮೇಲೆ ಮುಖ್ಯಮಂತ್ರಿ ಕೈ ಎತ್ತಿದ್ದನ್ನು ಅಂಗೀಕರಿಸಿದ ಡಾ ಯತೀಂದ್ರ ಸಿದ್ದರಾಮಯ್ಯ

Updated on: May 01, 2025 | 11:16 AM

ಪೊಲೀಸ್ ಅಧಿಕಾರಿಯ ಮೇಲೆ ಮುಖ್ಯಮಂತ್ರಿ ಕೈ ಎತ್ತಿದ್ದನ್ನು ಅಂಗೀಕರಿಸಿದ ಮೊದಲ ಕಾಂಗ್ರೆಸ್ ನಾಯಕ ಯತೀಂದ್ರ ಸಿದ್ದರಾಮಯ್ಯ ಇರಬಹುದು. ಮಿಕ್ಕವರೆಲ್ಲ ಘಟನೆಗೆ ಸಂಬಂಧಿಸಿದಂತೆ ತಮಗೆ ತೋಚಿದನ್ನು ಹೇಳಿ ಮುಖ್ಯಮಂತ್ರಿ ಕೈ ಎತ್ತಲಿಲ್ಲ ಎಂದು ಹೇಳಿದ್ದಾರೆ. ಅಲ್ಲೇನು ನಡೆಯಿತು ಅನ್ನೋದನ್ನು ಇಡೀ ಕರ್ನಾಟಕದ ಜನತೆ ನೋಡಿದೆ ಅನ್ನೋದನ್ನು ಯತೀಂದ್ರ ಮನಗಂಡಿದ್ದಾರೆ.

ಮೈಸೂರು, ಮೇ 1: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿಧಾನ ಪರಿಷತ್ ಸದಸ್ಯ ಡಾ ಯತೀಂದ್ರ ಸಿದ್ದರಾಮಯ್ಯ (Dr Yathindra Siddaramaiah), ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭದ್ರತಾ ಮತ್ತು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಕೈ ಎತ್ತಿದ್ದನ್ನು ಅಂಗೀಕರಿಸಿದರು. ಅದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿತ್ತು, ಬಿಜೆಪಿ ಕಾರ್ಯಕರ್ತರು ಹೇಗೆ ನುಸುಳಿದರು ಅಂತ ಪೊಲೀಸ್ ಅಧಿಕಾರಿಯ ಕರ್ತವ್ಯಲೋಪವನ್ನು ಸಿಟ್ಟಿನಿಂದ ಪ್ರಶ್ನಿಸುತ್ತ ಅದೇ ಆಕ್ರೋಶದಲ್ಲಿ ಕೈ ಎತ್ತಿದ್ದು ನಿಜ, ಆದರೆ ತನ್ನ ತಂದೆಯವರು ಯಾವತ್ತೂ ಅಧಿಕಾರಿಗಳನ್ನು ಕೆಟ್ಟದ್ದಾಗಿ ನಡೆಸಿಕೊಂಡಿಲ್ಲ ಎಂದು ಯತೀಂದ್ರ ಹೇಳಿದರು.

ಇದನ್ನೂ ಓದಿ:  ಪಾಕಿಸ್ತಾನದ ಪರ ಯಾರೇ ಘೋಷಣೆ ಕೂಗಿದರೂ ಅದು ತಪ್ಪು ಮತ್ತು ದೇಶದ್ರೋಹ: ಸಿದ್ದರಾಮಯ್ಯ, ಸಿಎಂ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ