ಜನರಲ್ ರಾವತ್ ಮತ್ತು ಬೇರೆ 12 ಜನರನ್ನು ಬಲಿಪಡೆದ ಹೆಲಿಕಾಪ್ಟರ್ ಕೊನೆಯ ಕ್ಷಣಗಳ ಮೊಬೈಲ್ ಫುಟೇಜ್ ಫೇಕ್ ಅಲ್ಲ!
ಕೆಳಮಟ್ಟದಲ್ಲಿ ಹಾರುತ್ತಿರುವ ಚಾಪರ್ ಮೋಡಗಳ ನಡುವೆ ಕಣ್ಮರೆಯಾದ ನಂತರ ಒಂದು ಜೋರಾದ ಕೇಳಿಸುತ್ತದೆ. ಅದಾದ ಮೇಲೆ ನಾಲ್ವರು ಯುವತಿಯರು ಅಲ್ಲಿರುವ ನ್ಯಾರೋಗೇಜ್ ರೇಲ್ವೇ ಹಳಿಗಳ ಪಕ್ಕದಿಂದ ಧಾವಿಸಿ ಬರುತ್ತಾರೆ.
ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಅವರನ್ನು ಸೇರಿ 13 ಜನರನ್ನು ಬಲಿತೆಗೆದುಕೊಂಡ ವಾಯುಸೇನೆಯ ಹೆಲಿಕಾಪ್ಟರ್ ತಮಿಳುನಾಡಿನ ಕುನೂರ್ ಮತ್ತು ಮೆಟ್ಟುಪಾಳ್ಯ ನಡುವೆ ಪತನಗೊಳ್ಳುವ ಮೊದಲು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದ ದೃಶ್ಯ ಗುರುವಾರದಂದು ಎಲ್ಲ ಟಿವಿ ವಾಹಿನಿಗಳಲ್ಲಿ ಬಿತ್ತ್ತರಿಸಲಾಗುತ್ತಿದೆ ಮತ್ತು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ. ಏತನ್ನಧ್ಯೆ, ಸದರಿ ವಿಡಿಯೋ ನೈಜ್ಯವೇ ಅನ್ನೋದರ ಬಗ್ಗೆ ಚರ್ಚೆ ಶುರುವಾಗಿತ್ತು. ಅದನ್ನು ಕಂಡುಕೊಳ್ಳಲು ನಿರ್ಧರಿಸಿದ ಟಿವಿ9 ಕನ್ನಡ ವಾಹಿನಿಯು ಮೈಸೂರಿನ ವರದಿಗಾರ ರಾಮ್ ಅವರನ್ನು ಸ್ಥಳಕ್ಕೆ ಕಳಿಸಿತ್ತು. ರಾಮ್ ಅವರು ಸ್ಥಳಕ್ಕೆ ತೆರಳಿ ಈ ವರದಿಯನ್ನು ಕಳಿಸಿದ್ದಾರೆ.
ಕೆಳಮಟ್ಟದಲ್ಲಿ ಹಾರುತ್ತಿರುವ ಚಾಪರ್ ಮೋಡಗಳ ನಡುವೆ ಕಣ್ಮರೆಯಾದ ನಂತರ ಒಂದು ಜೋರಾದ ಕೇಳಿಸುತ್ತದೆ. ಅದಾದ ಮೇಲೆ ನಾಲ್ವರು ಯುವತಿಯರು ಅಲ್ಲಿರುವ ನ್ಯಾರೋಗೇಜ್ ರೇಲ್ವೇ ಹಳಿಗಳ ಪಕ್ಕದಿಂದ ಧಾವಿಸಿ ಬರುತ್ತಾರೆ. ಈ ಭಾಗದಲ್ಲಿರುವ ಒಬ್ಬ ಪುರುಷ ಆ ಮಹಿಳೆಯರಿಗೆ ತಮಿಳು ಭಾಷೆಯಲ್ಲಿ ಏನದು ಸದ್ದು ಅಂತ ಕೇಳುತ್ತಾರೆ. ಅವರು ನಮಗೂ ಗೊತ್ತಿಲ್ಲ ಸದ್ದು ಮಾತ್ರ ಕೇಳಿಸಿತು ಅಂತ ಹೇಳುತ್ತಾರೆ.
ಆ ಪುರುಷ ಮತ್ತು ಮಹಿಳೆಯರು ಮಾತಾಡಿದ ಅದೇ ಸ್ಥಳಕ್ಕೆ ರಾಮ್ ಹೋಗಿ ಮೊಬೈಲ್ ಫೋನಲ್ಲಿ ಆ ದೃಶ್ಯ ನಿರ್ದಿಷ್ಟವಾಗಿ ಎಲ್ಲಿಂದ ಸೆರೆ ಹಿಡಿಯಲ್ಪಟ್ಟಿದೆಯೋ ಅಲ್ಲಿ ನಿಂತು ಸ್ಥಳವನ್ನು ಅವಲೋಕಿಸಿದ್ದಾರೆ ಮತ್ತು ಅಲ್ಲಿಂದಲೇ ಕಾಪ್ಟರ್ ಮೋಡಗಳ ನಡುವೆ ನುಗ್ಗಿದ ದೃಶ್ಯ ಅದೇ ಸ್ಥಳದಿಂದ ಶೂಟ್ ಆಗಿರುವುದನ್ನು ಖಚಿತಪಡಿಸಿದ್ದಾರೆ.
ಅದರರ್ಥ ಟಿವಿ ಚ್ಯಾನೆಲ್ ಗಳಲ್ಲಿ ತೋರಿಸುತ್ತಿರುವ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮೊಬೈಲ್ ಫುಟೇಜ್ ಫೇಕ್ ಅಲ್ಲ, ನೈಜ್ಯವಾದದ್ದು.