Unstable Prime Ministerial candidate! ಬೆಂಗಳೂರಲ್ಲಿ ವಿರೋಧ ಪಕ್ಷಗಳ ನಾಯಕರ ಸಭೆ, ರಸ್ತೆಯಲ್ಲಿ ನಿತೀಶ್ ಕುಮಾರ್ ವಿರುದ್ಧ ಕುಹಕದ ಪೋಸ್ಟರ್​ಗಳು!

|

Updated on: Jul 18, 2023 | 10:56 AM

ಪೊಲೀಸರು ಫ್ಲೆಕ್ಸ್​​​​ಗಳನ್ನು ಕಿತ್ತು, ಹರಿದು ಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಬೆಂಗಳೂರು: ವಿರೋಧ ಪಕ್ಷಗಳ ನಾಯಕರ (leaders of opposition) ಸಭೆ ನಗರದ ಹೋಟೆಲೊಂದರಲ್ಲಿ ಆರಂಭವಾಗಿದೆ, 24 ಪಕ್ಷಗಳ ನಾಯಕರು ಒಂದೆಡೆ ಸೇರಿ 2024ರ ಲೋಕಸಭಾ ಚುನಾವಣೆಗೆ (Lok Sabha Polls) ಒಂದು ಮೈತ್ರಿಕೂಟವನ್ನು ರಚಿಸಿಸುವ ತಯಾರಿಯಲ್ಲಿ ತೊಡಗಿದ್ದಾರೆ. ವಿರೋಧ ಪಕ್ಷಗಳು ಬಿಹಾರ ಮುಖ್ಯಮಂತ್ರಿ ನೀತಿಶ್ ಕುಮಾರ್ (Nitish Kumar) ಅವರನ್ನು ಮುಂದಿನ ಪ್ರಧಾನ ಮಂತ್ರಿ ಅಭ್ಯರ್ಥಿಯೆಂದು ಘೋಷಿಸುವ ಸಾಧ್ಯತೆಯೂ ಇದೆ. ಆದರೆ ವಿರೋಧ ಪಕ್ಷಗಳ ಈ ಆಯ್ಕೆಗೆ ಬೆಂಗಳೂರಲ್ಲಿ ಕೆಲವರ ತೀವ್ರ ವಿರೋಧ ವ್ಯಕ್ತವಾಗಿದೆ. ಅವರು ನಿತೀಶ್ ಕುಮಾರ್ ವಿರೋಧಿಗಳು ಇಲ್ಲವೇ ಮಹಾ ಮೈತ್ರಿಕೂಟದ ವಿರೋಧಿಗಳಾಗಿರುವ ಸಾಧ್ಯತೆಯೂ ಇದೆ. ನಿತೀಶ್ ವಿರುದ್ಧ ಬ್ಯಾನರ್ ಮತ್ತು ಫ್ಲೆಕ್ಸ್​ಗಳನ್ನು​​​ ಕಾವೇರಿ ಜಂಕ್ಷನ್ ನಿಂದ ವಿಂಡ್ಸರ್ ಮ್ಯಾನರ್ ನಡುವಿನ ರಸ್ತೆಯಲ್ಲಿ ಕಟ್ಟ್ಟುವ ಕೆಲಸವನ್ನು ಈ ವಿರೋಧಿಗಳು ಮಾಡಿದ್ದಾರೆ. ಪೋಸ್ಟರ್ ಗಳಲ್ಲಿ ನಿತೀಶ್ ಕುಮಾರ್ ಫೋಟೋ ಹಾಕಿ, ಬಿಹಾರದಲ್ಲಿ ಸುಲ್ತಾನ್ ಗಂಜ್ ಸೇತುವೆ ಎರಡು ಬಾರಿ ಕುಸಿದಿರುವುದನ್ನು ಉಲ್ಲೇಖಿಸಿ, ಒಬ್ಬ ಅಸ್ಥಿರ ಪ್ರಧಾನ ಮಂತ್ರಿ ಅಭ್ಯರ್ಥಿ ಅಂತ ಬರೆದಿದ್ದಾರೆ. ಪೊಲೀಸರು ಪೋಸ್ಟರ್ ಗಳನ್ನು ಕಿತ್ತು, ಹರಿದು ಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ