ಮದುವೆಗಳನ್ನು ಬ್ಯಾನ್ ಮಾಡದಿದ್ದರೆ ಗರ್ಲ್ಫ್ರೆಂಡ್ ವಿವಾಹ ಬೇರೆಯವನೊಂದಿಗೆ ಆಗುತ್ತದೆ: ನೀತಿಷ್ ಕುಮಾರ್ಗೆ ಪ್ರಿಯಕರನ ಮೊರೆ!
ಬಿಹಾರದ ಒಬ್ಬ ಮಹಾನುಭಾವ ತಾನು ಪ್ರೀತಿಸಿದ ಹುಡುಗಿ ಬೇರೆಯವನೊಂದಿಗೆ ಮದುವೆಯಾಗುವದನ್ನು ತಪ್ಪಿಸಲು ನಾವ್ಯಾರೂ ಯೋಚಿಸಿದ, ಕಲ್ಪಿಸಿದ ಹಂತಕ್ಕೆ ಹೋಗಿದ್ದಾನೆ. ಅವನ ಪ್ರಯತ್ನ ಕೊವಿಡ್ ಕುರಿತ ಸುದ್ದಿಗಳನ್ನು ಕೇಳಿ ನೋಡಿ ಬೇಸತ್ತಿರುವ ಜನರಿಗೆ ಕೊಂಚ ಮನರಂಜನೆಯನ್ನು ಒದಗಿಸಿದೆ.
ನಮ್ಮ ದೇಶದಲ್ಲೇ ಆಗಲಿ ಅಥವಾ ವಿದೇಶಗಳಲ್ಲಾಗಲಿ ಲವ್ ಸ್ಟೋರಿಗಳಿಗೆ ಕೊರತೆಯಿಲ್ಲ. ಅವು ವಿಪುಲವಾಗಿ ಸಿಗುತ್ತವೆ. ಕೆಲವು ಯಶಸ್ವೀ ಲವ್ ಸ್ಟೋರಿಗಳಾದರೆ ಕೆಲವು ದುರಂತದಲ್ಲಿ ಕೊನೆಗೊಂಡಿರುವಂಥವು. ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು, ತಾನು ಪ್ರೀತಿಸಿದವನೊಂದಿಗೆ ಅಥವಾ ಪ್ರೀತಿಸಿದವಳೊಂದಿಗೆ ಮದುವೆಯಾಗಲು ಕೆಲವರು ಯಾವ ಹಂತಕ್ಕಾದರೂ ಹೋಗುತ್ತಾರೆ. ಅಂಥ ಕತೆಗಳನ್ನು ನಾವು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಆದರೆ ಬಿಹಾರದ ಒಬ್ಬ ಮಹಾನುಭಾವ ತಾನು ಪ್ರೀತಿಸಿದ ಹುಡುಗಿ ಬೇರೆಯವನೊಂದಿಗೆ ಮದುವೆಯಾಗುವದನ್ನು ತಪ್ಪಿಸಲು ನಾವ್ಯಾರೂ ಯೋಚಿಸಿದ, ಕಲ್ಪಿಸಿದ ಹಂತಕ್ಕೆ ಹೋಗಿದ್ದಾನೆ. ಅವನ ಪ್ರಯತ್ನ ಕೊವಿಡ್ ಕುರಿತ ಸುದ್ದಿಗಳನ್ನು ಕೇಳಿ ನೋಡಿ ಬೇಸತ್ತಿರುವ ಜನರಿಗೆ ಕೊಂಚ ಮನರಂಜನೆಯನ್ನು ಒದಗಿಸಿದೆ.
ಓಕೆ, ನಮ್ಮ ಈ ಕತೆ ಹೀರೋನ ಹೆಸರು ಪಂಕಜ್ ಕುಮಾರ್. ಅವನು ಪ್ರಾಯಶಃ ಬಿಹಾರಿನ ಮೋತಿಹಾರ್ನಲ್ಲಿ ವಾಸವಾಗಿದ್ದಾನೆ. ವಿಷಯವೇನೆಂದರೆ ಅವನು ಪ್ರೀತಿಸುತ್ತಿದ್ದ ಹುಡುಗಿಯ ಮದುವೆ ಬೇರೆಯವನೊಂದಿಗೆ ಫಿಕ್ಸ್ ಆಗಿದೆ. ಅದನ್ನು ತಡೆಯಲು ಬೇರೆ ಪ್ರಯತ್ನಗಳನ್ನು ಮಾಡಿರರುವ ಬಗ್ಗೆ ಮಾಹಿತಿಯಿಲ್ಲ. ಆದರೆ, ಮೇ 13 ರಂದು ಬಿಹಾರದ ಮುಖ್ಯಮಂತ್ರಿ ನೀತಿಶ್ ಕುಮಾರ್ ಅವರು ರಾಜ್ಯದ ಕೊವಿಡ್ ಸ್ಥಿತಿಯ ಬಗ್ಗೆ ಒಂದು ಟ್ವೀಟ್ ಮಾಡಿದಾಗ ಅವನಿಗೊಂದಯ ಉಪಾಯ ಹೊಳೆದಿದೆ.
ತಮ್ಮ ಟ್ವೀಟ್ನಲ್ಲಿ ನೀತಿಶ್ ಅವರು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಲಾಕ್ಡೌನ್ ಜಾರಿಗೊಳಿದ್ದರಿಂದ ಕೊವಿಡ್ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ ಎಂದು ಹೇಳುತ್ತಾ ಸಹಕರಿಸಿದ ಜನರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅವರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಪಂಕಜ್, ‘ಸರ್ ನೀವು ಮದುವೆಗಳ ಮೇಲೂ ನಿರ್ಬಂಧ ಹೇರಿದರೆ ಬೇರೆಯವನೊಂದಿಗೆ ಮೇ19ಕ್ಕೆ ನಡೆಯಲಿರುವ ನನ್ನ ಗರ್ಲ್ಫ್ರೆಂಡ್ ಮದುವೆಯೂ ನಿಂತುಹೋಗುತ್ತದೆ. ನಿಮಗೆ ನಾನು ಜೀವನಪರ್ಯ್ಯಂತ ಆಭಾರಿಯಾಗಿರುತ್ತೇನೆ,’ ಎಂದು ಟ್ವೀಟ್ ಮಾಡಿದ್ದಾನೆ!
सर अगर शादी-ब्याह पे भी रोक लगा देते तो मेरी girlfriend की शादी थी 19 मई को वह भी रुक जाती"आप का हम जीवन भर आभारी रहेंगे ??
— Pankaj Kumar Gupta (@PankajK78249443) May 13, 2021
ಅವನ ಟ್ವೀಟ್ಗೆ ಮುಖ್ಯಮಂತ್ರಿ ಪ್ರತಿಕ್ರಿಯಿಸಿಲ್ಲ. ಆದರೆ ಅದನ್ನು ಓದಿದ ಕೆಲ ಜನ ಉತ್ತರಿಸಿದ್ದಾರೆ ಮತ್ತು ಸಲಹೆಗಳನ್ನೂ ನೀಡಿದ್ದಾರೆ.
ಫಾರುಖ್ ಖಾನ್ ಹೆಸರಿನ ಒಬ್ಬ ವ್ಯಕ್ತಿ ಮದುವೆ ನಿಂತು ಹೋದರೆ ಅವಳನ್ನು ಮದುವೆಯಾಗ್ತೀಯಾ ಅಂತ ಕೇಳಿದ್ದಾನೆ.
Shaadi ruk gayi to baad me karoge shaadi usse ???
— Farukh Khan (@Pathanitweet) May 16, 2021
ಅಮಿತ್ ಕುಮಾರ ಸೇನ್ಗುಪ್ತಾ ಹೆಸರಿನ ಮತ್ತೊಬ್ಬ ವ್ಯಕ್ತಿ, ನೀತಿಶ್ ಅವರಿಗೆ ಪಂಕಜ್ನ ಮನವಿಯನ್ನು ಪೂರೈಸುವಂತೆ ಕೇಳಿದ್ದಾನೆ.
Aapada me awsar 🙂 Nitish ji, meri bhi vinti hai, pankaj bhai ki request par sangyan le !!
— Amit Kumar Sengupta (@poet_amit) May 16, 2021
ಶೈಲೇಂದ್ರ ಗುಪ್ತಾ ಹೆಸರಿನ ಒಬ್ಬ ವ್ಯಕ್ತಿ ವೇದಾಂತಿಯಂತೆ ಸಲಹೆ ನೀಡಿದ್ದಾನೆ. ಸಹೋದರನೇ, ಪ್ರೀತಿ ಕೇವಲ ಜೀವನದ ಒಂದು ಭಾಗ ಮಾತ್ರ, ಅದು ಬದುಕಿನ ಹೃದಯವಲ್ಲ, ನಾನು ಪ್ರೀತಿ-ಪ್ರೇಮದ ವಿರೋಧಿಯಲ್ಲ. ಪ್ರೀತಿ ಮಾಡು, ಆದರೆ ಅದಕ್ಕೆ ಮೊದಲು ಆಕೆಯ ಪ್ರೀತಿಗೆ ಯೋಗ್ಯನಾಗು, ಹಾಗಾದಲ್ಲಿ ಮಾತ್ರ ಆಕೆ ನಿನ್ನನ್ನು ಬಿಟ್ಟು ಎಲ್ಲೂ ಹೋಗಳು.
Are bhai
Love is only part of life
It is not heart of life
Hm love k khilaf nhi hai love karo lekin sbse phle us love ko pane k kabil bn jao taki wo kisi or k pas n ja ske ……
— SHAILESH KUMAR GUPTA (@SHAILES78643161) May 18, 2021
ವೆಲ್, ಪಂಕಜ್ ಪ್ರೇಯಸಿಯ ಮದುವೆಯಂತೂ ನಡೆದು ಹೋಗಿದೆ. ಮದುವೆಗಳನ್ನು ಬ್ಯಾನ್ ಮಾಡದ ಮುಖ್ಯಮಂತ್ರಿಗಳನ್ನು ಅವನು ಪ್ರಾಯಶಃ ಶಪಿಸುತ್ತಿರಬಹುದು!
ಇದನ್ನೂ ಓದಿ: Steroids in Covid: ಸ್ಟಿರಾಯ್ಡ್ ಎಂದರೇನು? ಕೊರೊನಾ ಸೋಂಕು ಚಿಕಿತ್ಸೆಯಲ್ಲಿ ಈ ಔಷಧವನ್ನು ಹೇಗೆ ಬಳಸಲಾಗುತ್ತದೆ?