ಮೋಹನ್ ಜುನೇಜ ಶವದ ಎದುರು ಮಂಕಾಗಿ ಕೂತ ಸಾಕು ಪ್ರಾಣಿಗಳು; ಇಲ್ಲಿದೆ ವಿಡಿಯೋ
ಮೋಹನ್ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ. ಇನ್ನು, ಮೋಹನ್ ಅವರ ಮನೆಯ ಸಾಕು ಪ್ರಾಣಿಗಳು ತಮ್ಮದೇ ರೀತಿಯಲ್ಲಿ ದುಃಖ ಹೊರಹಾಕುತ್ತಿವೆ.
‘ಕೆಜಿಎಫ್ 2’ ಚಿತ್ರದ (KGF:Chapter 2) ಮೂಲಕ ಮೋಹನ್ ಜುನೇಜ (Mohan Juneja) ಜನಪ್ರಿಯತೆ ಹೆಚ್ಚಿತ್ತು. ಕನ್ನಡದ ನೂರಾರು ಸಿನಿಮಾಗಳಲ್ಲಿ ಪೋಷಕ ಹಾಗೂ ಹಾಸ್ಯ ಪಾತ್ರ ಮಾಡುವ ಮೂಲಕ ಅವರು ಗುರುತಿಸಿಕೊಂಡಿದ್ದರು. ಮೇ 6ರ ತಡರಾತ್ರಿ ನಿಧನ ಹೊಂದಿದ್ದಾರೆ. ಈ ವಿಚಾರ ಸಿನಿಪ್ರಿಯರಿಗೆ ಬೇಸರ ಮೂಡಿಸಿದೆ. ಅವರ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ. ಇನ್ನು, ಮೋಹನ್ ಅವರ ಮನೆಯ ಸಾಕು ಪ್ರಾಣಿಗಳು ತಮ್ಮದೇ ರೀತಿಯಲ್ಲಿ ದುಃಖ ಹೊರಹಾಕುತ್ತಿವೆ. ಮೋಹನ್ ಜುನೇಜ ಶವದ ಎದುರು ಮನೆಯ ಶ್ವಾನಗಳು ಮಂಕಾಗಿ ಕೂತಿದೆ. ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಇಂದು ಮಧ್ಯಾಹ್ನ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ. ‘ಕೆಜಿಎಫ್’ ಸಿನಿಮಾ ನಿರ್ಮಿಸಿರುವ ‘ಹೊಂಬಾಳೆ ಫಿಲ್ಮ್ಸ್’ (Hombale Films) ಮೋಹನ್ ಜುನೇಜ ಅವರ ಆತ್ಮಕ್ಕೆ ಶಾಂತಿ ಕೋರಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದೆ.