ಬೆಳಗಾವಿಯ ಮಠವೊಂದರಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸನ್ಮಾನ ನಡೆದಾಗ ಸಿದ್ದರಾಮಯ್ಯ ಮತ್ತು ಶಿವಕುಮಾರ ಜೊತೆಗಿದ್ದರು

ಹೂವಿನ ಮಾಲೆಯನ್ನು ಕೊರಳಿಗೆ ಹಾಕಿದ ಬಳಿಕ ಅವರ ತಲೆ ಮೇಲೆ ಸ್ವಾಮೀಜಿಗಳು ಪುಷ್ಪಾರ್ಚನೆ ಮಾಡಲು ಮುಂದಾದಾಗ ಶಿವಕುಮಾರ ಬೇಡ ಬಿಡಿ ಅಂತ ಅವರನ್ನು ತಡೆಯುತ್ತಾರೆ. ಆದರೆ ಸಿದ್ದರಾಮಯ್ಯ ಹಾಕಲಿ ಬಿಡಯ್ಯ ಅಂತ ಸ್ವಾಮೀಜಿಗಳಿಂದ ಲಕ್ಷ್ಮಿ ಅವರ ತಲೆಯ ಮೇಲೆ ಪುಷ್ಪಾರ್ಚನೆ ಮಾಡಿಸುತ್ತಾರೆ

TV9kannada Web Team

| Edited By: Arun Belly

May 07, 2022 | 4:29 PM

Belagavi: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಒಂದೇ ವೇದಿಕೆಯ ಮೇಲೆ ಕಾಣಿಸಿಕೊಳ್ಳವುದು ಬಹಳ ಕಡಿಮೆ ಸಂದರ್ಭಗಳಲ್ಲಿ ಮಾತ್ರ. ಶನಿವಾರದಂದು ಬೆಳಗಾವಿ ತಾಲ್ಲೂಕಿನ ಅರಳಿಕಟ್ಟಿ ಗ್ರಾಮದ ತೋಂಟಾದಾರ್ಯ ಮಠದಲ್ಲಿ ಈ ಭಾಗದ ಜನಪ್ರಿಯ ಶಾಸಕಿ ಕಾಂಗ್ರೆಸ್ ನ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಅವರಿಗೆ ಸನ್ಮಾನ ಮಾಡಲಾಯಿತು. ಸದರಿ ಸಮಾರಂಭದಲ್ಲಿ ಶಿವಕುಮಾರ ಮತ್ತು ಸಿದ್ದರಾಮಯ್ಯ ಜೊತೆಗಿದ್ದರು. ಮಠದ ಶಿವಮೂರ್ತಿ ದೇವರ ಪಟ್ಟಾಧಿಕಾರ ಕಾರ್ಯಕ್ರಮದಲ್ಲಿ ಶಾಸಕಿಯನ್ನು ಸ್ವಾಮೀಜಿಗಳ ತಂಡ ಲಕ್ಷ್ಮಿ ಅವರಿಗೆ ಶಾಲು ಹೊದಿಸಿ, ಹೂಮಾಲೆ ಹಾಕಿ ಗೌರವಿಸಿತು.

ಹೂವಿನ ಮಾಲೆಯನ್ನು ಕೊರಳಿಗೆ ಹಾಕಿದ ಬಳಿಕ ಅವರ ತಲೆ ಮೇಲೆ ಸ್ವಾಮೀಜಿಗಳು ಪುಷ್ಪಾರ್ಚನೆ ಮಾಡಲು ಮುಂದಾದಾಗ ಶಿವಕುಮಾರ ಬೇಡ ಬಿಡಿ ಅಂತ ಅವರನ್ನು ತಡೆಯುತ್ತಾರೆ. ಆದರೆ ಸಿದ್ದರಾಮಯ್ಯ ಹಾಕಲಿ ಬಿಡಯ್ಯ ಅಂತ ಸ್ವಾಮೀಜಿಗಳಿಂದ ಲಕ್ಷ್ಮಿ ಅವರ ತಲೆಯ ಮೇಲೆ ಪುಷ್ಪಾರ್ಚನೆ ಮಾಡಿಸುತ್ತಾರೆ. ಒಬ್ಬರು ಹೂಂ ಅಂತಾರೆ ಮತ್ತೊಬ್ಬರು ಬೇಡ ಅನ್ನುತ್ತಾರೆ ಅಂತ ಗೊಂದಲಕ್ಕೆ ಸಿಕ್ಕುವ ಲಕ್ಷ್ಮಿ ಅವರು ಕೊನೆಗೆ ಕುರ್ಚಿಯ ಮೇಲೆ ಕೂತು ಪುಷ್ಪಾರ್ಚನೆ ಮಾಡಿಸಿಕೊಳ್ಳುತ್ತಾರೆ.

ಹಿನ್ನೆಲೆಯಲ್ಲಿ ಕಾರ್ಯಕ್ರಮದ ನಿರೂಪಕರು ಲಕ್ಷ್ಮಿ ಅವರ ಗುಣಗಾನ ಮಾಡುವುದು ಕೇಳಿಸುತ್ತದೆ. ಆವರು ಕೇವಲ ಒಬ್ಬ ಶಾಸಕಿಯಾಗಿ ಮಾತ್ರ ಕೆಲಸ ಮಾಡದೆ ಸಮಾಜಮುಖಿ ಚಿಂತನೆಗಳನ್ನಿಟ್ಟುಕೊಂಡು ಸಮಾಜಕ್ಕೆ ಸೇವೆ ಒದಗಿಸುತ್ತಿದ್ದಾರೆ ಅಂತ ಅವರು ಹೇಳುತ್ತಿರುವುದು ಕೇಳಿಸುತ್ತದೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮುಖದಲ್ಲಿ ಧನ್ಯತೆಯ ಭಾವವನ್ನು ಕಾಣಬಹುದು.

ಇದನ್ನೂ ಓದಿ:   ಬೆಳಗಾವಿ: ‘ಸಂವಿಧಾನ ಉಳಿದರೆ ಎಲ್ಲಾ ಸಮುದಾಯದವರು ಉಳಿಯುತ್ತಾರೆ’; ಜಾತಿ ರಾಜಕಾರಣದ ಕುರಿತು ಸಿದ್ದರಾಮಯ್ಯ ಮಾತು

Follow us on

Click on your DTH Provider to Add TV9 Kannada