AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಮೋಹನ್​ದಾಸ್ ಪೈ

ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಮೋಹನ್​ದಾಸ್ ಪೈ

ಕಿರಣ್​ ಸೂರ್ಯ
| Edited By: |

Updated on: Oct 09, 2026 | 5:13 PM

Share

ವಿದೇಶಿ ಉದ್ಯೋಗಿಗಳಿಗೆ ಗ್ರೀನ್ ಕಾರ್ಡ್ ಪ್ರಾಯೋಜಿಸುವ ಈ ಕಂಪನಿಗಳ ನೂತನ ಹಾಗೂ ಬಾಕಿ ಇರುವ ಅರ್ಜಿಗಳ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಎಚ್-1ಬಿ ವೀಸಾದಿಂದ ಗ್ರೀನ್ ಕಾರ್ಡ್ ಪಡೆಯಲು ಕಾಯುತ್ತಿರುವ ಲಕ್ಷಾಂತರ ಭಾರತೀಯ ಐಟಿ ವೃತ್ತಿಪರರ ಅಮೆರಿಕ ಕನಸಿಗೆ ಈ ನಿರ್ಧಾರ ತೀವ್ರ ಆಘಾತ ನೀಡಿದೆ. ಇನ್ನು ಈ ಬಗ್ಗೆ ಐಟಿ ದಿಗ್ಗಜ ಮೋಹನ್ ದಾಸ್ ಪೈ ಪ್ರತಿಕ್ರಿಯಿಸಿ ಪರಿಣಾಮದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರು, ಅಕ್ಟೋಬರ್ 09): ಅಮೆರಿಕನ್ನರ ಉದ್ಯೋಗ ರಕ್ಷಣೆ ಮತ್ತು ವೀಸಾ ದುರುಪಯೋಗ ತಡೆಯುವ ನೆಪದಲ್ಲಿ ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಎಚ್‌ಸಿಎಲ್ ಹಾಗೂ ಮೈಕ್ರೋಸಾಫ್ಟ್ ಕಂಪನಿಗಳನ್ನು ಅಮೆರಿಕ ಸರ್ಕಾರ ‘ಕಾಯಂ ಕಾರ್ಮಿಕ ಪ್ರಮಾಣಪತ್ರ ಕಾರ್ಯಕ್ರಮ’ದಿಂದ ಅಮಾನತುಗೊಳಿಸಿದೆ. ಇದರಿಂದಾಗಿ ವಿದೇಶಿ ಉದ್ಯೋಗಿಗಳಿಗೆ ಗ್ರೀನ್ ಕಾರ್ಡ್ ಪ್ರಾಯೋಜಿಸುವ ಈ ಕಂಪನಿಗಳ ನೂತನ ಹಾಗೂ ಬಾಕಿ ಇರುವ ಅರ್ಜಿಗಳ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಎಚ್-1ಬಿ ವೀಸಾದಿಂದ ಗ್ರೀನ್ ಕಾರ್ಡ್ ಪಡೆಯಲು ಕಾಯುತ್ತಿರುವ ಲಕ್ಷಾಂತರ ಭಾರತೀಯ ಐಟಿ ವೃತ್ತಿಪರರ ಅಮೆರಿಕ ಕನಸಿಗೆ ಈ ನಿರ್ಧಾರ ತೀವ್ರ ಆಘಾತ ನೀಡಿದೆ. ಇನ್ನು ಈ ಬಗ್ಗೆ ಐಟಿ ದಿಗ್ಗಜ ಮೋಹನ್ ದಾಸ್ ಪೈ ಪ್ರತಿಕ್ರಿಯಿಸಿ ಪರಿಣಾಮದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಟಿವಿ9 ಜೊತೆ ಮಾತನಾಡಿದ ಮೋಹನ್ ದಾಸ್ ಪೈ, ಪರ್ಮ್ ಅಂದರೆ ಏನು ಪ್ರೋಗ್ರಾಂ ಎಂದು ಅರ್ಥ ಮಾಡಿಕೊಳ್ಳಬೇಕು. ಅಮೆರಿಕದಲ್ಲಿ ಕೆಲಸ ಮಾಡುವ ಕಂಪನಿಗಳು , ಹೆಚ್-1 B ಅಡಿಯಲ್ಲಿ ಕೆಲಸ ಮಾಡುವ ಕಂಪನಿಗಳು ಗ್ರೀನ್ ಕಾರ್ಡ್ ಅಪ್ಲೈ ಮಾಡಲು ಎಂಡೋಸ್ಮೆಂಟ್ ನೀಡಬೇಕು.ಏನ್ ಎಂಡೋಸ್ಮೆಂಟ್ ಅಂದರೆ ಇವರು ನಮ್ಮ ಜೊತೆ ಕೆಲಸ ಮಾಡ್ತಿದ್ದಾರೆ. ಗ್ರೀನ್ ಕಾರ್ಡ್ ಅಪ್ಲೈ ಮಾಡ್ತಿದ್ದಾರೆ. ಇವರು ಒಳ್ಳೆಯವರು ಒಳ್ಳೆಯ ಕೆಲಸ ಮಾಡ್ತಾರೆ ಎಂದು ಮಾಹಿತಿ ನೀಡಬೇಕು. ಹಿಂದಿನ ವರ್ಷ ಒಂದು ಲಕ್ಷದ 12 ಸಾವಿರ ಪರ್ಮ್ ಅಪ್ಲಿಕೇಶನ್ ಮಾಡಿದ್ರು. ಎಲ್ಲರು ಇಂಡಿಯನ್ ಕಂಪನಿಗಳು ಮಾಡಿದ್ದು ಎಷ್ಟು ಅಂದರೆ 1400 ಮಾತ್ರ ಅಂದರೆ 2% ರಷ್ಟು ಮಾತ್ರ. ಇದರಿಂದ ಯಾವ ಇಂಪ್ಯಾಕ್ಟ್ ಆಗುತ್ತದೆ. ಅವರು ಏನ್ ಮಾಡಿದ್ದಾರೆ ನಿಮ್ಮ ಪರ್ಮ್ ಪ್ರೋಗ್ರಾಂ ನಿಂದ ಸಸ್ಪೆಂಡ್ ಮಾಡ್ತಿವಿ. ಅಂದರೆ ನೀವು ಎಂಡೋಸ್ಮೆಂಟ್ ಮಾಡಲು ಆಗಲ್ಲ. ಅದರಿಂದ ಯಾವ ಇಂಪ್ಯಾಕ್ಟ್ ಇಲ್ಲ. ಒಂದೋ ಎರಡೋ ಕಂಪನಿಗಳಿಂದ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More