ಗೌತಮಿನ ಸ್ವಮ್ಮಿಂಗ್ಪೂಲ್ಗೆ ತಳ್ಳಿದ ಮೋಕ್ಷಿತಾ; ಹೆಚ್ಚಿತು ದ್ವೇಷ
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಮೋಕ್ಷಿತಾ ಹಾಗೂ ಗೌತಮಿ ಮಧ್ಯೆ ಕಿತ್ತಾಟ ಜೋರಾಗಿದೆ. ಇಬ್ಬರೂ ಭರ್ಜರಿ ಕಾದಾಟ ಮಾಡಿಕೊಳ್ಳುತ್ತಿದ್ದಾರೆ. ಇಬ್ಬರ ಮಧ್ಯೆ ಮಾತಿನ ಚಕಮಕಿ ನಿರಂತರ. ಈಗ ಗೌತಮಿ ಅವರನ್ನು ಮೋಕ್ಷಿತಾ ಸ್ವಿಮ್ಮಿಂಗ್ ಪೂಲ್ಗೆ ತಳ್ಳಿದ್ದಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಮೋಕ್ಷಿತಾ ಹಾಗೂ ಗೌತಮಿ ಮಧ್ಯೆ ಯಾವುದೂ ಸರಿ ಇಲ್ಲ. ಇಬ್ಬರೂ ಒಳ್ಳೆಯ ಗೆಳೆಯರಾಗಿ ಉಳಿದುಕೊಂಡಿಲ್ಲ. ಇಬ್ಬರ ಮಧ್ಯೆ ಕಿರಿಕ್ ಆಗಿದೆ. ಇದು ಮೊದಲಿನಿಂದಲೂ ನಡೆದುಕೊಂಡು ಬರುತ್ತಿದೆ. ಈಗ ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡಿದ್ದರು. ಇದರ ಪ್ರಕಾರ ಮನೆಯಲ್ಲಿ ಪಕ್ಷಪಾತಿ ಯಾರು ಎಂಬಿತ್ಯಾದಿ ಹೇಳಿಕೆಗಳನ್ನು ನೀಡಬೇಕಿತ್ತು. ಆ ಬಳಿಕ ಅವರನ್ನು ಸ್ವಿಮ್ಮಿಂಗ್ಪೂಲ್ಗೆ ತಳ್ಳಬೇಕು. ಮೋಕ್ಷಿತಾ ಅವರು ಗೌತಮಿ ಹೆಸರನ್ನು ತೆಗೆದುಕೊಂಡು ಅವರನ್ನು ಸ್ವಿಮ್ಮಿಂಗ್ಪೂಲ್ಗೆ ತಳ್ಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Dec 19, 2024 08:51 AM
Latest Videos