ಮಂಕೀ ಕ್ಯಾಪ್ ಧರಿಸಿ ಕಳ್ಳತನ ಮಾಡಲು ಕಾರಲ್ಲಿ ಬರುತ್ತಿದ್ದ ತಮಿಳುನಾಡು ಮೂಲದ ಕಳ್ಳರ ಬಂಧನ
ಒಟ್ಟು ಎಂಟು ಕಳ್ಳತನದ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಚಂದ್ರಪ್ರಕಾಶ್ ಮತ್ತು ಚಂದ್ರನ್ ರಿಂದ ಪೊಲೀಸರು ₹ 27.28 ಲಕ್ಷ ಮೌಲ್ಯದ 354 ಗ್ರಾಂ ಚಿನ್ನಾಭರಣ ಮತ್ತು ಮೂರು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಸಿಟಿವಿ ಕೆಮೆರಾಗಳಲ್ಲಿ ಸೆರೆಯಾದ ದೃಶ್ಯವೊಂದನ್ನು ಆಧರಿಸಿಯೇ ಕಳ್ಳರ ಬಂಧನ ಸಾಧ್ಯವಾಯಿತು ಎಂದು ಪೊಲೀಸರು ಹೇಳುತ್ತಾರೆ.
ಬೆಂಗಳೂರು: ತಲೆಗೆ ಮಂಕಿ ಧರಿಸಿ ಕಾರಲ್ಲಿ ಬಂದು ಮನೆಗಳನ್ನು ದೋಚುತ್ತಿದ್ದ ಶ್ರೀಮಂತ ಕಳ್ಳರ ಬಗ್ಗೆ ನಾವು ಈಗಾಗಲೇ ವರದಿ ಮಾಡಿದ್ದೇವೆ. ಇವರ ಬಗ್ಗೆ ಲೇಟೆಸ್ಟ್ ಅಪ್ಡೇಟ್ ಅಂದರೆ ನಗರದ ಆವಲಹಳ್ಳಿ ಠಾಣೆಯ ಪೊಲೀಸರು ಬಂಧಿಸಿರೋದು. ಕಳ್ಳರು ಖದೀಮರು ಎಷ್ಟೇ ಚಾಲಾಕಿಗಳಾಗಿದ್ದರೂ ಪೊಲೀಸರ ಚಾಣಾಕ್ಷ್ಯತೆಯನ್ನು ಮೀರಿಸಲಾರರು. ಅಂದಹಾಗೆ ಮಂಕೀ ಕ್ಯಾಪ್ ಧರಿಸಿ ಆವಲಹಳ್ಳಿ, ಕೆಆರ್ ಪುರ ಮತ್ತು ಹೊಸಕೋಟೆ ಭಾಗಗಳಲ್ಲಿ ಕಳುವು ಮಾಡುತಿದ್ದ ಖದೀಮರ ಹೆಸರು ಚಂದ್ರಪ್ರಕಾಶ್ ಮತ್ತು ಚಂದ್ರನ್-ತಮಿಳುನಾಡು ಮೂಲದವರು. ಮಧ್ಯರಾತ್ರಿಯ ನಂತರ ಇವರ ಚಟುವಟಿಕೆ ಶುರುವಾಗುತ್ತಿತ್ತಂತೆ, ಅವರು ಕಳುವು ಮಾಡುತ್ತಿರುವ ಒಂದು ದೃಶ್ಯವನ್ನು ಇಲ್ಲಿ ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರಿನಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ 12 ಅಂತರಾಜ್ಯ ಕಳ್ಳರ ಬಂಧನ: 61 ಬೈಕ್ಗಳು ವಶಕ್ಕೆ
Latest Videos