ಅಂಕೋಲ ಬಳಿ ಗುಡ್ಡ ಕುಸಿತಕ್ಕೆ ಬಲಿಯಾದವರ ಸಂಖ್ಯೆ ಒಂಭತ್ತಲ್ಲ, ಇಪ್ಪತ್ತಕ್ಕೂ ಹೆಚ್ಚು!

|

Updated on: Jul 17, 2024 | 10:34 AM

ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡಕುಸಿತ ಉಂಟಾಗುತ್ತಿರುವುದು ಇದು ಮೊದಲ ಸಲವಲ್ಲ ಕೊನೆಯದೂ ಅಲ್ಲ. ಪ್ರತಿ ಮಳೆಗಾಲದಲ್ಲಿ ದುರ್ಘಟನೆಗಳು ನಡೆಯುತ್ತಿವೆ, ಜನ ಸಾಯುತ್ತಿದ್ದಾರೆ, ರಸ್ತ್ತೆ ಬಂದ್ ಅಗಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಗುಡ್ಡ ಕುಸಿತ ಉಂಟಾಗುತ್ತಿರುವ ಹಿಂದಿನ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಕಾರವಾರ: ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು ಬಳಿ ನಿನ್ನೆ ಗುಡ್ಡ ಉಂಟಾದ ಗುಡ್ಡ ಕುಸಿತದಿಂದ 9 ಜನ ಮಣ್ಣಿನಡಿ ಸಿಲುಕಿದ್ದಾರೆ ಎಂದು ವರದಿ ಮಾಡಲಾಗಿತ್ತು. ಆದರೆ ಅನಾಹುತದ ಪ್ರಮಾಣ ಮತ್ತಷ್ಟು ಭೀಕರವಾಗಿದೆ. ಘಟನೆ ನಡೆದ ಸ್ಥಳದಿಂದ ನಮ್ಮ ವರದಿಗಾರ ನೀಡುತ್ತಿರುವ ಮಾಹಿತಿಯ ಪ್ರಕಾರ ದುರ್ಘಟನೆಯಲ್ಲಿ 20 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಗುಡ್ಡ ಕುಸಿತವುಂಟಾದಾಗ ಮಣ್ಣಿನ ರಭಸದಿಂದ ರಸ್ತೆಯ ಪಕ್ಕ ಪಾರ್ಕ್ ಮಾಡಲಾಗಿದ್ದ ಟ್ಯಾಂಕರ್ ಒಂದು ಪಕ್ಕದಲ್ಲೇ ಹರಿಯುವ ಗಂಗಾವಳಿ ನದಿಗೆ ಜಾರಿ ಹೋಗಿದ್ದ ದೃಶ್ಯವನ್ನು ನಿನ್ನೆ ತೋರಿಸಿದ್ದೆವು. ಗುಡ್ಡದ ಕೆಳಗಿದ್ದ 2 ಮನೆಗಳು ಮತ್ತೊಂದು ಟೀ ಸ್ಟಾಲ್ ಧ್ವಂಸಗೊಂಡಿವೆ. ಒಂದು ಮನೆಯಲ್ಲಿದ್ದ ಪೂರ್ತಿ ಕುಟುಂಬ ಬಲಿಯಾಗಿದ್ದರೆ ಮತ್ತೊಂದು ಮನೆಯಲ್ಲಿದ್ದ 7 ಜನರ ಪೈಕಿ ಒಬ್ಬ ವೃದ್ಧೆ ಮಾತ್ರ ಸಾವನ್ನಪ್ಪಿದ್ದಾರೆ ಉಳಿದವರು ಬಚಾವಾಗಿದ್ದಾರೆ. ಎನ್ ಡಿಅರ್ ಎಫ್ ತಂಡದ ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದನ್ನು ನೋಡಬಹುದು. ಇದುವರೆಗೆ 5 ಮೃತದೇಹಗಳು ಪತ್ತೆಯಾಗಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:     ಮಂಗಳೂರು-ಮೂಡಬಿದರೆ ರಸ್ತೆಯಲ್ಲಿ ಗುಡ್ಡಕುಸಿತವುಂಟಾಗುವ ಭೀತಿ, ರಸ್ತೆ ಕಾಮಗಾರಿಗಾಗಿ ಗುಡ್ಡ ಅಗೆದಿದ್ದು ಶಾಪವಾಯಿತೇ?

Follow us on