ಚಿಕ್ಕಮಗಳೂರು: ವಿಠಲ ಗ್ರಾಮದ ಬಳಿ 20 ಕ್ಕೂ ಅಧಿಕ ಕಾಡಾನೆಗಳು ಪ್ರತ್ಯಕ್ಷ, ಸ್ಥಳೀಯರಲ್ಲಿ ಆತಂಕ
ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿರುವ ಸಂದರ್ಭದಲ್ಲೇ ಚಿಕ್ಕಮಗಳೂರಿನ ಎನ್ಆರ್ ಪುರ ತಾಲೂಕಿನ ವಿಠಲ ಗ್ರಾಮದ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಮರಿಯಾನೆಯೊಂದಿಗೆ ಭದ್ರಾ ಹಿನ್ನೀರಿಗೆ ಬಂದ 20ಕ್ಕೂ ಹೆಚ್ಚು ಕಾಡಾನೆಗಳ ಕಂಡು ಗ್ರಾಮಸ್ಥರು ಭೀತಿಗೊಳಗಾಗಿದ್ದಾರೆ.
ಚಿಕ್ಕಮಗಳೂರು, ಫೆಬ್ರವರಿ 10: ಚಿಕ್ಕಮಗಳೂರಿನ ಎನ್ಆರ್ ಪುರ ತಾಲೂಕಿನ ವಿಠಲ ಗ್ರಾಮದ ಬಳಿ ಭದ್ರಾ ಹಿನ್ನೀರಿನ ಬಳಿ ಬಂದ ಮರಿಯಾನೆಗಳೊಂದಿಗೆ ಕಾಡಾನೆಗಳ ಹಿಂಡು ಬಂದಿದೆ. 20 ಕ್ಕೂ ಅಧಿಕ ಕಾಡಾನೆಗಳಿರುವ ಹಿಂಡು ಭದ್ರಾ ನದಿ ಹಿನ್ನೀರಿಗೆ ನೀರು ಕುಡಿಯಲು ಬಂದಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.