Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಕೋಲಾ ಬಳಿ ಅನಾಥವಾಗಿ ನಿಂತಿದ್ದ ಕಾರೊಂದರಲ್ಲಿ 1ಕೊಟಿ ರೂ. ಗೂ ಹೆಚ್ಚು ದಾಖಲೆಯಿಲ್ಲದ ಹಣ ಪತ್ತೆ!

ಅಂಕೋಲಾ ಬಳಿ ಅನಾಥವಾಗಿ ನಿಂತಿದ್ದ ಕಾರೊಂದರಲ್ಲಿ 1ಕೊಟಿ ರೂ. ಗೂ ಹೆಚ್ಚು ದಾಖಲೆಯಿಲ್ಲದ ಹಣ ಪತ್ತೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 29, 2025 | 2:34 PM

ಕಾರಿನ ಸೀಟಿನಡಿಯಲ್ಲಿ ಬಾಕ್ಸ್ ಇಡಲು ಸ್ಥಳ ಮಾಡಲಾಗಿದೆ ಮತ್ತು ಅಲ್ಲಿದ್ದ ಪೆಟ್ಟಿಗೆಯಲ್ಲೇ ಹಣ ಪತ್ತೆಯಾಗಿದೆ. ಭಾರೀ ಮೊತ್ತದ ಹಣವನ್ನು ನೋಡಿ ಪೊಲೀಸರು ಗಾಬರಿಗೊಳಗಾಗಿದ್ದು ಸುಳ್ಳಲ್ಲ. ಚುನಾವಣೆಯ ಸಮಯದಲ್ಲಿ ಹೀಗೆ ಕಾರುಗಳಲ್ಲಿ ಇಲ್ಲವೇ ಬೇರೆ ವಾಹನಗಳಲ್ಲಿ ದಾಖಲೆಯಿಲ್ಲದ ಹಣ ಸಾಗಿಸಲಾಗುತ್ತದೆ, ಅದರೆ ರಾಜ್ಯದಲ್ಲಿ ಈಗ ಯಾವುದೇ ಚುನಾವಣೆ ನಡೆಯುತ್ತಿಲ್ಲ.

ಉತ್ತರ ಕನ್ನಡ: ಜಿಲ್ಲೆಯ ಅಂಕೋಲಾ ತಾಲ್ಲೂಕಿನ ರಾಮಗುಳಿ ಗ್ರಾಮದ ಬಳಿ ನಿರ್ಜನ ಪ್ರದೇಶವೊಂದರಲ್ಲಿ ಅನಾಥವಾಗಿ ನಿಂತಿದ್ದ ಕಾರಲ್ಲಿ ದಾಖಲೆಯಿಲ್ಲದ ರೂ. 1.14 ಕೋಟಿ ಹಣ ಪತ್ತೆಯಾಗಿದೆ. ಹಣ ಯಾರಿಗೆ ಸೇರಿದ್ದು ಅಂತ ಗೊತ್ತಾಗಿಲ್ಲ ಆದರೆ ಕೆಎ19 ಎಂಪಿ 1036 ನೋಂದಣಿ ಸಂಖ್ಯೆಯ ಕಾರು ಮಂಗಳೂರು ನಿವಾಸಿ ರಾಜೇಶ್ ಪವಾರ್ ಹೆಸರಿನ ವ್ಯಕ್ತಿಗೆ ಸೇರಿದ್ದು ಅಂತ ಪೊಲೀಸರು ಪತ್ತೆ ಮಾಡಿದ್ದಾರೆ. ಕಾರನ್ನು ಅಕ್ರಮ ವ್ಯವಹಾರಗಳಿಗೆ ಬಳಸುತ್ತಿದ್ದಿದ್ದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಯಾಕೆಂದರೆ ಕಾರಲ್ಲಿ ಹಲವಾರು ನಂಬರ್ ಪ್ಲೇಟ್ ಗಳು ಸಿಕ್ಕಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಲೋಕಾಯುಕ್ತ ಬಲೆಗೆ ಮತ್ತೊಬ್ಬ ಪಾಲಿಕೆ ಅಧಿಕಾರಿ, ಕಾರಿಂದ ದಾಖಲೆಯಿಲ್ಲದ ಹಣ ಬರಾಮತ್ತು