Video: ದೇವರು ಕೈಗಳನ್ನು ಕೊಟ್ಟಿಲ್ಲ ಎಂಬ ವಿಷಾದವಿಲ್ಲ, ಆಡಲು ಜತೆಗಾರರಿಲ್ಲ ಎಂಬ ಬೇಸರವಿಲ್ಲ, ಮುಖದಲ್ಲೊಂದು ಮಂದಹಾಸ

Updated on: Apr 17, 2026 | 2:54 PM

ಜಗತ್ತು ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ಎಲ್ಲವೂ ಸುಲಭವಾಗಿ ಸಿಕ್ಕರೆ, ಇನ್ನು ಕೆಲವರಿಗೆ ಒಂದು ಸಾಮಾನ್ಯ ಕ್ಷಣವೂ ಒಂದು ದೊಡ್ಡ ಕನಸಾಗಿರುತ್ತದೆ. ಇತ್ತೀಚೆಗೆ ಕಂಡುಬಂದ ಈ ದೃಶ್ಯವು ನಮ್ಮನ್ನು ಸ್ತಬ್ಧಗೊಳಿಸುತ್ತದೆ. ಅವಳೊಬ್ಬಳು ಪುಟ್ಟ ಹುಡುಗಿ. ಹುಟ್ಟುತ್ತಲೇ ಆಕೆಗೆ ಕೈಗಳಿರಲಿಲ್ಲ, ಅಂಗಳದಲ್ಲಿ ಅವಳ ವಯಸ್ಸಿನ ಇತರ ಮಕ್ಕಳು ಓಡುತ್ತಾ, ಆಟವಾಡುತ್ತಾ, ಒಬ್ಬರನ್ನೊಬ್ಬರು ಕೈಹಿಡಿದು ಎಳೆಯುತ್ತಾ ಸಂಭ್ರಮಿಸುತ್ತಿದ್ದರು.

ಆದರೆ ಈ ಮಗು? ಒಂದು ಮೂಲೆಯಲ್ಲಿ ಸದ್ದಿಲ್ಲದೆ ಕುಳಿತು ಸಂತೋಷದಿಂದಲೇ ನೋಡುತ್ತಿದ್ದಳು. ಜೀವನದ ಬಗ್ಗೆ ಯಾವುದೇ ವಿಷಾದವಿರಲಿಲ್ಲ. ಅವಳ ಮುಖದಲ್ಲಿ ದ್ವೇಷವಿರಲಿಲ್ಲ, ಅಸೂಯೆ ಇರಲಿಲ್ಲ. ಬದಲಿಗೆ, ಒಂದು ಮಂದಹಾಸವಿತ್ತು. ಆದರೆ ಆ ನಗುವಿನ ಹಿಂದೆ ಒಂದು ಭಾರವಾದ ಮೌನವಿತ್ತು. ಅವಳ ಕಣ್ಣುಗಳು ತುಂಬಿ ಬಂದಿದ್ದವು, ಆ ಕಣ್ಣುಗಳು ಏನೋ ಹೇಳಲು ಪ್ರಯತ್ನಿಸುತ್ತಿದ್ದವು, ಆದರೆ ನಮ್ಮ ವೇಗದ ಬದುಕಿನಲ್ಲಿ ಯಾರಿಗೂ ಅದು ಅರ್ಥವಾಗುತ್ತಿರಲಿಲ್ಲ. ಜೀವನ ಕೆಲವೊಮ್ಮೆ ಕಷ್ಟಗಳು ಬರಬಹುದು, ಆದರೆ ಅಂತಹ ಸಂದರ್ಭದಲ್ಲೂ ಈ ಪುಟ್ಟ ಹುಡುಗಿಯಂತೆ ನಗುನಗುತ್ತಾ ಬದುಕನ್ನು ಎದುರಿಸುವುದು ನಿಜವಾದ ಶೌರ್ಯ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More