AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ಓವರ್​ನಲ್ಲೇ ತೂಫಾನ್... ಹೊಸ ಇತಿಹಾಸ ನಿರ್ಮಾಣ

ಮೊದಲ ಓವರ್​ನಲ್ಲೇ ತೂಫಾನ್… ಹೊಸ ಇತಿಹಾಸ ನಿರ್ಮಾಣ

ಝಾಹಿರ್ ಯೂಸುಫ್
|

Updated on: Jan 17, 2026 | 7:55 AM

Share

Royal Challengers Bengaluru Women vs Gujarat Giants Women: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಗುಜರಾತ್ ಜೈಂಟ್ಸ್ 18.5 ಓವರ್​ಗಳಲ್ಲಿ 150 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಆರ್​ಸಿಬಿ 32 ರನ್​ಗಳ ಜಯ ಸಾಧಿಸಿದೆ.

ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಮೊದಲ ಓವರ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದೆ. ಅದು ಕೂಡ ಬರೋಬ್ಬರಿ 23 ರನ್​ಗಳಿಸುವ ಮೂಲಕ.

ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ತಂಡವು ಪ್ರಥಮ ಓವರ್​ನಲ್ಲಿ ಬರೋಬ್ಬರಿ 23 ರನ್​ ಕಲೆಹಾಕಿತು. ಹೀಗೆ 23 ರನ್​ ಬಿಟ್ಟು ಕೊಟ್ಟಿರುವುದು ಆರ್​ಸಿಬಿ ತಂಡದ ಮಾಜಿ ವೇಗಿ ರೇಣುಕಾ ಸಿಂಗ್ ಠಾಕೂರ್.

ಗುಜರಾಜ್ ಜೈಂಟ್ಸ್ ಪರ ಮೊದಲ ಓವರ್ ಎಸೆದ ರೇಣುಕಾ ಸಿಂಗ್ ಮೊದಲ ಎಸೆತದಲ್ಲೇ ವೈಡ್ ಎಸೆದರು. ಈ ಚೆಂಡು ವಿಕೆಟ್ ಕೀಪರ್​ನ ವಂಚಿಸಿ ಬೌಂಡರಿ ಲೈನ್ ದಾಟಿತು. ಇದಾದ ಬಳಿಕ ಆರ್​ಸಿಬಿ ಬ್ಯಾಟರ್ ಗ್ರೇಸ್ ಹ್ಯಾರಿಸ್ ಹ್ಯಾಟ್ರಿಕ್ ಫೋರ್ ಬಾರಿಸಿದರು. ಇದರ ಜೊತೆಗೆ ರೇಣುಕಾ ಮತ್ತೆರಡು ವೈಡ್​​ಗಳನ್ನು ಎಸೆದರು. ಇನ್ನು ಕೊನೆಯ ಎಸೆತದಲ್ಲಿ ಹ್ಯಾರಿಸ್ ಮತ್ತೊಂದು ಫೋರ್ ಬಾರಿಸಿದರು.

ಹೀಗೆ ಮೊದಲ ಓವರ್​ನಲ್ಲಿ ಬರೋಬ್ಬರಿ 23 ರನ್​ ನೀಡುವ ಮೂಲಕ ರೇಣುಕಾ ಸಿಂಗ್ ಠಾಕೂರ್ ವುಮೆನ್ಸ್ ಪ್ರೀಮಿಯರ್ ಲೀಗ್​ ಇತಿಹಾಸದಲ್ಲೇ ದುಬಾರಿ ಪ್ರಥಮ ಓವರ್ ಎಸೆದ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ಹೀನಾಯ ದಾಖಲೆ ತನುಜಾ ಕನ್ವರ್ ಹೆಸರಿನಲ್ಲಿತ್ತು.

2023 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಪರ ಮೊದಲ ಓವರ್ ಎಸೆದ ತನುಜಾ ಕನ್ವರ್ 21 ರನ್ ನೀಡುವ ಮೂಲಕ ಅನಗತ್ಯ ದಾಖಲೆ ನಿರ್ಮಿಸಿದ್ದರು. ಇದೀಗ 23 ರನ್​ ಬಿಟ್ಟು ಕೊಟ್ಟು ರೇಣುಕಾ ಸಿಂಗ್ ಠಾಕೂರ್ ಹೀನಾಯ ದಾಖಲೆಗೆ ಕೊರೊಳೊಡ್ಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಗುಜರಾತ್ ಜೈಂಟ್ಸ್ 18.5 ಓವರ್​ಗಳಲ್ಲಿ 150 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಆರ್​ಸಿಬಿ 32 ರನ್​ಗಳ ಜಯ ಸಾಧಿಸಿದೆ.