ಹಾಸನ: ಮಹಿಳೆಯ ಬಲಿ ಪಡೆದಿದ್ದ ಕಾಡಾನೆ ಕೊನೆಗೂ ಸೆರೆ
ಹಾಸನದ ಸಕಲೇಶಪುರದಲ್ಲಿ ಮಹಿಳೆಯನ್ನು ಬಲಿತೆಗೆದುಕೊಂಡಿದ್ದ ಪುಂಡಾನೆಯನ್ನು ಅರಣ್ಯ ಇಲಾಖೆ ನಾಲ್ಕು ಗಂಟೆಗಳ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮೋಗಲಿ ಗ್ರಾಮದಲ್ಲಿ ಜನವರಿ 13 ರಂದು ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಸದ್ಯ ಆನೆಯನ್ನು ಬೇಲೂರಿನಲ್ಲಿ ಸರೆಹಿಡಿಯಲಾಗಿದೆ.
ಹಾಸನ, ಜನವರಿ 17: ಹಾಸನದ ಸಕಲೇಶಪುರದ ಗ್ರಾಮದಲ್ಲಿ ಮಹಿಳೆಯ ಬಲಿ ಪಡೆದಿದ್ದ, ಜನರಿಗೆ ತೊಂದರೆ ನೀಡುತ್ತಿದ್ದ ಪುಂಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಬೇಲೂರು ತಾಲೂಕಿನ ಬೆಳ್ಳಾವರ ಕಾಫಿ ತೋಟದಲ್ಲಿ ನಾಲ್ಕು ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಡೆಸಿ ಈ ಆನೆಯನ್ನು ಹಿಡಿಯಲಾಗಿದೆ. ಜನವರಿ 13ರಂದು ಮೊಗಲಿಯಲ್ಲಿ ಓರ್ವ ಮಹಿಳೆಯನ್ನು ಬಲಿತೆಗೆದುಕೊಂಡಿದ್ದ ಈ ಕಾಡಾನೆ ಸೆರೆಯಿಂದಾಗಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
Published on: Jan 17, 2026 07:07 AM
