ಸೂರ್ಯ ನೆತ್ತಿಗೇರಿದರೂ ಮಲಗಿದ್ದ ಮಕ್ಕಳನ್ನು ಎಬ್ಬಿಸಲು ವಾದ್ಯವೃಂದವನ್ನೇ ಕರೆಸಿದ ಮಹಾತಾಯಿ!
ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಇರುವುದರಿಂದ ಮಕ್ಕಳು ಬೆಳಗ್ಗೆ ಏಳುವುದು ತಡವಾಗುತ್ತಿದೆ. ಅನೇಕ ಮನೆಗಳಲ್ಲಿ ಈ ಘಟನೆ ನಡೆಯುತ್ತಲೇ ಇರುತ್ತದೆ. ತಾಯಿ ಎಷ್ಟೇ ಎಬ್ಬಿಸಿದರೂ, ಅವರು ಇನ್ನೂ ಹತ್ತು ನಿಮಿಷ, ಐದು ನಿಮಿಷ ನಿದ್ದೆ ಮಾಡುತ್ತಾರೆ. ಅಂತಹ ಮಕ್ಕಳನ್ನು ಎಬ್ಬಿಸಲು ತಾಯಿ ಕಂಡುಕೊಂಡ ಉಪಾಯ ಈಗ ಇಂಟರ್ನೆಟ್ ಅಲ್ಲಿ ವೈರಲ್ ಆಗಿದೆ. ಹಾಗಾದರೆ ತಾಯಿ ಮಾಡಿದ್ದಾದರೂ ಏನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ನವದೆಹಲಿ, ಅಕ್ಟೋಬರ್ 25: ಸಾಮಾಜಿಕ ಜಾಲತಾಣಗಳಲ್ಲಿ ಒಂದು ತಮಾಷೆಯ ವಿಡಿಯೋ ವೈರಲ್ (Video Viral) ಆಗುತ್ತಿದೆ. ಈ ವಿಡಿಯೋದಲ್ಲಿ ಒಬ್ಬಳು ತಾಯಿ ರಜೆ ಇರುವ ಕಾರಣದಿಂದ ತಡವಾಗಿ ಏಳುವ ತನ್ನ ಮಕ್ಕಳನ್ನು ಬೆಳಿಗ್ಗೆ ಎಬ್ಬಿಸಲು ಬ್ಯಾಂಡ್ ಅನ್ನೇ ಕರೆಸಿದ್ದಾರೆ. ಈ ವೇಳೆ ಗಾಬರಿಯಿಂದ ಎದ್ದು ಕುಳಿತ ಮಕ್ಕಳು ಬ್ಯಾಂಡ್ನವರನ್ನು ನೋಡಿ ಮತ್ತೆ ಮೈ ತುಂಬ ಹೊದಿಕೆ ಹೊದ್ದು ಮಲಗಿದ್ದಾರೆ. ಈ ತಮಾಷೆಯ ವಿಡಿಯೋ ನೋಡಿದ ನೆಟ್ಟಿಗರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಮ್ಮನ ಜಾಣತನಕ್ಕೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ