ಓಕಳೀಪುರಂ ಕ್ಷೇತ್ರದ ಶಾಸಕನನ್ನು ಅಂಡರ್ಪಾಸ್ಗೆ ಕರೆತಂದು ಉಗಿಯಬೇಕೆಂದ ಅಟೋರಿಕ್ಷಾ ಚಾಲಕ
ಕೇವಲ ಎಂಎಲ್ಎ ಮಾತ್ರವಲ್ಲ, ಅಧಿಕಾರದಲ್ಲಿರುವ ಸಿದ್ದರಾಮಯ್ಯ ಸರ್ಕಾರವನ್ನೂ ಆಟೋರಿಕ್ಷಾ ಡ್ರೈವರ್ ತೆಗಳುತ್ತಾರೆ. ಅಧಿಕಾರಕ್ಕೆ ಬಂದ ಹೊಸತರಲ್ಲಿ ಬ್ರ್ಯಾಂಡ್ ಬೆಂಗಳೂರು ಎಂದು ಸೂಟುಬೂಟು ಧರಿಸಿ ಕುಣಿದಾಡಿದ ಡಿಕೆ ಶಿವಕುಮಾರ್ ಬೆಂಗಳೂರು ಉಸ್ತುವಾರಿ ಸಚಿವರೂ ಹೌದು. ಅವರೇ ಆಟೋರಿಕ್ಷಾ ಚಾಲಕನಿಗೆ ಉತ್ತರಿಸಬೇಕು.
ಬೆಂಗಳೂರು: ನಗರದಲ್ಲಿ ಮಳೆಯಾದರೆ ರಸ್ತೆಗಳು ನದಿಗಳಾಗುತ್ತವೆ ಮತ್ತು ಅಂಡರ್ಪಾಸ್ಗಳು ಸ್ವಿಮ್ಮಿಂಗ್ ಪೂಲ್ಗಳಾಗಿ ಮಾರ್ಪಡುತ್ತವೆ. ಸರ್ಕಾರ ಯಾವುದೇ ಇರಲಿ ಜನರ ಬವಣೆ ತಪ್ಪಲ್ಲ. ಓಕಳೀಪುರಂ ಅಂಡರ್ಪಾಸ್ ಜಲಾವೃತಗೊಂಡಿರರುವ ಸುದ್ದಿಯನ್ನು ಈಗಾಗಲೇ ನೀಡಿಯಾಗಿದೆ. ಅಲ್ಲಿಂದ ಹಾದು ಬರುತ್ತಿರುವ ಜನರ ಪ್ರತಿಕ್ರಿಯೆಗಳನ್ನು ಒಂದಷ್ಟು ಕೇಳಿ. ಈ ಕ್ಷೇತ್ರದ ಶಾಸಕನನ್ನು ಮನಸಾರೆ ಉಗಿಯಬೇಕೆಂದು ಒಬ್ಬ ಆಟೋರಿಕ್ಷಾ ಡ್ರೈವರ್ ಬಹಳ ಬೇಸರದಿಂದ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರು: ಕಂಟೋನ್ಮೆಂಟ್ ರಸ್ತೆಯಲ್ಲಿ ಸ್ವಲ್ಪ ಯಾಮಾರಿದ್ರೂ ಕಂಟಕ, ರಸ್ತೆಗುಂಡಿ ಮುಚ್ಚುವ ಕೆಲಸದಲ್ಲಿ ಪಾಲಿಕೆ ಹಳೇ ರಾಗ