ದರ್ಶನ್​ಗೆ ಚಿತ್ರರಂಗದಲ್ಲಿ ಬೆಳೆಯಬೇಕೆಂಬ ಛಲ ಬಂದಿದ್ದು ಹೇಗೆ?

ದರ್ಶನ್​ಗೆ ಚಿತ್ರರಂಗದಲ್ಲಿ ಬೆಳೆಯಬೇಕೆಂಬ ಛಲ ಬಂದಿದ್ದು ಹೇಗೆ?

ಮಂಜುನಾಥ ಸಿ.
|

Updated on:Jun 20, 2024 | 1:19 PM

ದರ್ಶನ್ ಇಂದು ಕೊಲೆ ಆರೋಪಿ, ಅವರ ವ್ಯಕ್ತಿತ್ವದ ಬಗ್ಗೆ ಈ ಹಿಂದೆಯೂ ಟೀಕೆಗಳಿದ್ದವು, ಹಾಗೆಂದು ಅವರು ಬೆಳೆದು ಬಂದ ಹಾದಿಯನ್ನು ಮೆಚ್ಚದೇ ಇರಲಾಗದು. ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ದರ್ಶನ್​ರ ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

ದರ್ಶನ್ (Darshan Thoogudeepa) ಇಂದು ಕೊಲೆ ಆರೋಪಿ, ದರ್ಶನ್​ರ ವ್ಯಕ್ತಿತ್ವದ ಬಗ್ಗೆ ಈ ಹಿಂದೆಯೂ ಟೀಕೆಗಳು ವ್ಯಕ್ತವಾಗಿದ್ದವು. ಸದಾ ಒಂದಿಲ್ಲೊಂದು ವಿವಾದದಲ್ಲಿ ದರ್ಶನ್ ಹೆಸರು ಕೇಳಿ ಬರುತ್ತಲೇ ಇತ್ತು. ಅದೆಲ್ಲ ಏನೇ ಇದ್ದರು, ದರ್ಶನ್ ಕಷ್ಟಪಟ್ಟು ಸಿನಿಮಾ ನಾಯಕರಾದವರು, ಅವರು ಆರಂಭದ ದಿನಗಳಲ್ಲಿ ಎದುರಿಸಿದ ಕಷ್ಟ ಇದನ್ನೆಲ್ಲ ನಿರ್ಲಕ್ಷಿಸುವಂತಿಲ್ಲ. ದರ್ಶನ್​ರ ಆಪ್ತ, ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು, ದರ್ಶನ್​ ಬೆಳೆದು ಬಂದ ರೀತಿಯ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ್ದಾರೆ. ತಾನು ಸಿನಿಮಾ ರಂಗದಲ್ಲಿ ಬೆಳೆಯಬೇಕು ಎಂದು ದರ್ಶನ್​ಗೆ ಅನ್ನಿಸಿದ್ದು ಯಾವಾಗ? ಅದಕ್ಕೆ ಕಾರಣವಾದ ಘಟನೆಗಳೇನು? ಈ ಕುರಿತು ಗಣೇಶ್ ಕಾಸರಗೋಡು ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 20, 2024 12:45 PM