ಹೊನ್ನಾಳಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮತ್ತು ಉಪನ್ಯಾಸಕರಿಗೆ ‘ಕ್ಲಾಸ್’ ತೆಗೆದುಕೊಂಡ ಶಾಸಕ ಎಮ್ ಪಿ ರೇಣುಕಾಚಾರ್ಯ!
ವಿಷಯ ಗೊತ್ತಾದ ಕೂಡಲೇ ಕಾಲೇಜಿಗೆ ಧಾವಿಸಿದ ರೇಣುಕಾಚಾರ್ಯಯ, ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ‘ಕ್ಲಾಸ್’ ತೆಗೆದುಕೊಂಡಿದ್ದಾರೆ.
ದಾವಣಗೆರೆ: ಬಿಜೆಪಿ ಶಾಸಕ ಎಮ್ ಪಿ ರೇಣುಕಾಚಾರ್ಯ (MP Renukacharya) ಅವರ ಮತಕ್ಷೇತ್ರವಾಗಿರುವ ಹೊನ್ನಾಳಿಯಲ್ಲಿರುವ (Honnali) ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕ ವರ್ಗದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ತಗಾದೆ ಮತ್ತಷ್ಟು ತೀವ್ರಗೊಂಡಿದ್ದು ಉಪನ್ಯಾಸಕರು (lecturers) ಪಾಠ ಮಾಡುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಹೀಗಾಗಿ, ಕಾಲೇಜಿನ ವಿದ್ಯಾರ್ಥಿಗಳು ಹೊರಗಡೆ ಬಂದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ವಿಷಯ ಗೊತ್ತಾದ ಕೂಡಲೇ ಕಾಲೇಜಿಗೆ ಧಾವಿಸಿದ ರೇಣುಕಾಚಾರ್ಯಯ, ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ‘ಕ್ಲಾಸ್’ ತೆಗೆದುಕೊಂಡು ನಿಮ್ಮ ಜಗಳಗಳಿಗೆ ಮಕ್ಕಳ ಭವಿಷ್ಯ ಹಾಳುಮಾಡಬೇಡಿ ಅಂತ ತಾಕೀತು ಮಾಡಿ ಎಲ್ಲರನ್ನು ಒಳಗೆ ಕಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ