Belagavi: ಮಹಾರಾಷ್ಟ್ರ ಸಚಿವರ ವಿರುದ್ಧ ಬಳೆ, ಅರಿಶಿನ ಕುಂಕುಮ ಹಿಡಿದು ಪ್ರತಿಭಟಿಸಿದ ಶಿವಸೇನೆ ಕಾರ್ಯಕರ್ತರು
ಬೆಳಗಾವಿಯ ಗಡಿಯಲ್ಲಿ ಶಿವಸೇನೆ ಕಾರ್ಯಕರ್ತರು ಮಹಾರಾಷ್ಟ್ರ ಸಚಿವರ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.
ಬೆಳಗಾವಿಯ ಗಡಿಯಲ್ಲಿ ಶಿವಸೇನೆ ಕಾರ್ಯಕರ್ತರ (Shiv Sena Activists) ಹೈಡ್ರಾಮಾ ನಡೆದಿದೆ. ಮಹಾರಾಷ್ಟ್ರ (Maharashtra) ಸಚಿವರ ವಿರುದ್ಧವೇ ಶಿವಸೇನೆ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ್, ಶಂಭುರಾಜ್ ದೇಸಾಯಿ ಬೆಳಗಾವಿಗೆ (Belagavi) ತೆರಳುವುದಾಗಿ ಹೇಳಿದ್ದರು. ಆದರೆ ಬೆಳಗಾವಿಗೆ ಹೋಗದಿದ್ದಕ್ಕೆ ಸಚಿವರ ವಿರುದ್ಧವೇ ಶಿವಸೇನೆ ಕಾರ್ಯಕರ್ತರು ಬಳೆ, ಅರಿಶಿನ ಕುಂಕುಮ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಬೆಳಗಾವಿ ಗಡಿಯೊಳಗೆ ನುಗ್ಗಲು ಯತ್ನಿಸಿದ ಶಿವಸೇನೆ ಕಾರ್ಯಕರ್ತರು
30ಕ್ಕೂ ಹೆಚ್ಚು ಶಿವಸೇನೆ ಕಾರ್ಯಕರ್ತರು ಬೆಳಗಾವಿ ಗಡಿಯೊಳಗೆ ನುಗ್ಗಲು ಯತ್ನಿಸಿದ್ದರು. ಆಗ ಕಾಗಲ್ ಪೊಲೀಸರ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಬೆಳಗಾವಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಘೋಷಣೆ ಕೂಗಿದ್ದಾರೆ.

