ಅಲೆಮಾರಿ ಜನಾಂಗಕ್ಕೆ ಆಸರೆಯಾದ ಜಿಲ್ಲಾಧಿಕಾರಿ: ದಾವಣಗೆರೆ ಡಿಸಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅಲೆಮಾರಿ ಸಮುದಾಯ
ಅಲೆಮಾರಿಗಳ 3 ದಶಕಗಳ ಹೋರಾಟಕ್ಕೆ ದಾವಣಗೆರೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಪರಿಹಾರ ಮುಕ್ತಿ ನೀಡಿದ್ದಾರೆ.
ದಾವಣಗೆರೆ: ಅಲೆಮಾರಿಗಳ 3 ದಶಕಗಳ ಹೋರಾಟಕ್ಕೆ ದಾವಣಗೆರೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ (Shivanand Kapashi) ಮುಕ್ತಿ ನೀಡಿದ್ದಾರೆ. ಅಲೆಮಾರಿ ಜನಾಂಗಕ್ಕೆ ಜಗಳೂರು ತಾಲೂಕಿನ ಉದಗಟ್ಟದ ಗ್ರಾಮದ ಬಳಿ ಸರ್ಕಾರಿ ಜಮೀನು ನೀಡಿದ್ದಾರೆ. ಅಲೆಮಾರಿಗಳು ಜಗಳೂರಿನ ವಿವಿಧಡೆ ಗುಡಿಸಲು ಹಾಕಿಕೊಂಡು ವಾಸವಿದ್ದರು. ಸಿಂದುಳ್ಳಿ, ಸಿಳ್ಳೆಕ್ಯಾತ ಸಮುದಾಯ 38 ಕುಟುಂಬಗಳಿಗೆ ಶಾಶ್ವತ ಮನೆ ಇಲ್ಲದೇ ಪರದಾಡುತ್ತಿದ್ದರು.
ಈ ಸಂಬಂಧ ಅಲೆಮಾರಿಗಳು 3 ದಶಕಗಳಿಂದ ಹೋರಾಟ ಮಾಡುತ್ತಿದ್ದರು. ಈ ಹಿನ್ನೆಲೆ ಅಲೆಮಾರಿ ಸಮುದಾಯದ ಜಿಲ್ಲಾಧಿಕಾರಿಗಳಿಗೆ ಇದೇ ಸ್ಥಳದಲ್ಲಿ ಮನೆ ಕಟ್ಟಿಸಿಕೊಟ್ಟರೆ ನಮ್ಮ ಜೀವನಕ್ಕೆ ಅನುಕೂಲವಾಗುತ್ತೆ ಎಂದು ಮನವಿ ಮಾಡಿದ್ದರು. ಅಲೆಮಾರಿಗಳ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿಗೆ ಉದಗಟ್ಟದ ಗ್ರಾಮದ ಬಳಿಯ ಸರ್ಕಾರಿ ಜಮೀನು ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ದಿಟ್ಟ ನಿರ್ಧಾರ ಅಲೆಮಾರಿ ಜನಾಂಗಕ್ಕೆ ಆಸರೆ. ಮೂರು ದಶಕಗಳ ಬಳಿಕ ಅಲೆಮಾರಿಗಳಿಗೆ ಸಿಕ್ಕ ಶಾಶ್ವತ ಪರಿಹಾರ.