ಶ್ರೀರಂಗಪಟ್ಟಣ: ನಿಮಿಷಾಂಭಾ ದೇವಸ್ಥಾನಕ್ಕೆ ಸುಮಲತಾ ಅಂಬರೀಶ್​ ಭೇಟಿ, ಶುಭ ಸೂಚನೆ ನೀಡಿದ ದೇವಿ

Edited By: ವಿವೇಕ ಬಿರಾದಾರ

Updated on: Feb 27, 2024 | 1:01 PM

ಈ ಬಾರಿಯ ಲೋಕಸಭೆ ಚುನಾವಣೆಯಲ್ಲೂ ಮಂಡ್ಯದಿಂದಲೇ ಸ್ಪರ್ಧಿಸುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್​ ಘೋಷಿಸಿದ್ದಾರೆ. ಈಗಾಗಲೆ ಜಿಲ್ಲಾ ಪ್ರವಾಸ ಆರಂಭಿಸಿರುವ ಸುಮಲತಾ ಅಂಬರೀಶ್​​, ಇಂದು (ಫೆ.27) ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ನಿಮಿಷಾಂಭ ದೇಗುಲಕ್ಕೆ ಭೇಟಿ ನೀಡಿದರು. ದೇವಿಗೆ ಪೂಜೆ ಮಾಡಿಸುತ್ತಿರುವ ವೇಳೆ ನಿಮಿಷಾಂಭ ದೇವಿ ಬಲಗಡೆಯಿಂದ ಹೂ ನೀಡಿದ್ದಾಳೆ.

ಮಂಡ್ಯ, ಫೆಬ್ರವರಿ 27: ಈ ಬಾರಿಯ ಲೋಕಸಭೆ ಚುನಾವಣೆಯಲ್ಲೂ (Lok Sabha Election) ಮಂಡ್ಯದಿಂದಲೇ (Mandya) ಸ್ಪರ್ಧಿಸುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್​ (Sumalatha Ambareesh) ಘೋಷಿಸಿದ್ದಾರೆ. ಈಗಾಗಲೆ ಜಿಲ್ಲಾ ಪ್ರವಾಸ ಆರಂಭಿಸಿರುವ ಸುಮಲತಾ ಅಂಬರೀಶ್​​, ಇಂದು (ಫೆ.27) ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ನಿಮಿಷಾಂಭ ದೇಗುಲಕ್ಕೆ (Nimishamba Temple) ಭೇಟಿ ನೀಡಿದರು. ದೇವಿಗೆ ಪೂಜೆ ಮಾಡಿಸುತ್ತಿರುವ ವೇಳೆ ನಿಮಿಷಾಂಭ ದೇವಿಯ ಬಲಗಡೆಯಿಂದ ಹೂ ಕೆಳಗೆ ಬಿದ್ದಿದೆ. ಈ ಮೂಲಕ ಶಕ್ತಿ ದೇವಿ ಶುಭ ಸೂಚನೆ ನೀಡಿದ್ದಾಳೆ ಎನ್ನಲಾಗುತ್ತಿದೆ. ಇದರಿಂದ ಲೋಕಸಭೆ ಚುನಾವಣೆಯಲ್ಲಿ ಒಳಿತಾಗಬಹುದು ಎಂಬ ಚರ್ಚೆ ಶುರುವಾಗಿದೆ.

ಪೂಜೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿಮಿಷಾಂಭ ದೇಗುಲಕ್ಕೆ ಬಂದರೇ ಒಂದು ವೈಬ್ರೇಷನ್ ಬರುತ್ತದೆ. ನನಗೋಸ್ಕರ ಅಂತ ನಾನು ಯಾವತ್ತೂ ಕೇಳಿಕೊಳ್ಳಲ್ಲ. ದೇಗುಲಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದೇನೆ. ಇವುತ್ತು ದೇವಿ ಆಶೀರ್ವಾದ ಮಾಡಿದ್ದಾಳೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
Prashantha B

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More