ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ನೈಸರ್ಗಿಕ ವೈಚಿತ್ರ್ಯ, ಭೂಗರ್ಭದಿಂದ ಉಕ್ಕಿ ಗುಡ್ಡೆ ಬೀಳುತ್ತಿರುವ ಕೆಸರಿನಂಥ ಮಣ್ಣು
ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಸೃಷ್ಟಿಯಾಗುತ್ತಿರುವ ಆತಂಕಗಳನ್ನು ಗಮನಿಸಿದರೆ, ಹೆದ್ದಾರಿ 275 ಅವೈಜ್ಞಾನಿಕವಾಗಿ ನಿರ್ಮಾಣವಾಗಿದೆಯಾ ಎಂಬ ಗುಮಾನಿ ಮೂಡುತ್ತದೆ. ನಿನ್ನೆ ಇದೇ ಹೆದ್ದಾರಿಯಲ್ಲಿ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡು ಹೆದ್ದಾರಿಯಲ್ಲಿ ಸಂಚಾರವೇ ನಿಂತುಹೋಗಬಹುದಾದ ಭೀತಿ ಸೃಷ್ಟಿಯಾಗಿತ್ತು. ಇವತ್ತು ಭೂಮಿಯೊಳಗಿಂದ ಕೆಸರಿನಂಥ ಮಣ್ಣು ಉಕ್ಕಿ ಬರುತ್ತಿದೆ. ಕೊಡಗು ಜಿಲ್ಲಾಡಳಿತ ಸಹ ಕೂಡಲೇ ಗಮನಹರಿಸಬೇಕು,
ಮಡಿಕೇರಿ, ಆಗಸ್ಟ್ 2: ನಿಸರ್ಗದ ಈ ವೈಚಿತ್ರ್ಯ ಭೂಗರ್ಭ ಶಾಸ್ತ್ರಜ್ಞರಿಗೆ (Geologists) ಮಾತ್ರ ಅರ್ಥವಾದೀತು ಮಾರಾಯ್ರೇ. ಮಡಿಕೇರಿ ಹೊರವಲಯದಲ್ಲಿರುವ ಕೊರ್ತಾಜೆ ಮೂಲಕ ಹಾದು ಹೋಗುವ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಒಂದು ವಿಚಿತ್ರ ವಿದ್ಯಮಾನ ಸಂಭವಿಸುತ್ತಿದ್ದು ಕೊಡಗಿನ ಟಿವಿ9 ವರದಿಗಾರ ಅದನ್ನು ವಿವರಿಸುತ್ತಿದ್ದಾರೆ. 2018 ರಲ್ಲಿ ಇಲ್ಲಿ ಭೂಕುಸಿತ ಉಂಟಾಗಿ ರಸ್ತೆಸಂಚಾರ ಬಂದ್ ಆಗಿತ್ತು ಮತ್ತು ಮಣ್ಣನ್ನು ಸ್ಥಳದಿಂದ ಸರಿಸಲಾಗಿತ್ತು. ಅದಾದ ಮೇಲೆ ಇಲ್ಲಿ ಪ್ರತಿವರ್ಷದ ಮಳೆಗಾಲದಲ್ಲಿ ಕೆಸರಿನಂಥ ಮಣ್ಣು ಗುಡ್ಡೆಬೀಳುತ್ತಿದ್ದೆ. ಇದು ಭೂಕುಸಿತ ಉಂಟಾದ ಸ್ಥಳದಿಂದ ಮೇಲೆ ಉಕ್ಕಿ ಬರುತ್ತಿದ್ದು ಗುಡ್ಡದೋಪಾದಿಯಲ್ಲಿ ಸುಣ್ಣದ ಕಲ್ಲಿನಂಥ ಮಣ್ಣು ಶೇಖರವಾಗುತ್ತದೆ. ಸ್ಥಳೀಯರಿಗಂತೂ ಯಾಕೆ ಹೀಗೆ ಅನ್ನೋದು ಅರ್ಥವಾಗುತ್ತಿಲ್ಲ. ಭೂಗರ್ಭ ಶಾಸ್ತ್ರಜ್ಞರೇ ಅವರ ಕುತೂಹಲಗಳಿಗೆ ಉತ್ತರ ಹೇಳಬೇಕು.
ಇದನ್ನೂ ಓದಿ: Kodagu Rain: ಭಾರೀ ಶಬ್ಧದೊಂದಿಗೆ ಭೂಕುಸಿತ, ಮಡಿಕೇರಿಯಲ್ಲಿ ಕೊಚ್ಚಿಬಂತು ಐದು ಎಕರೆಯಷ್ಟು ಭೂಮಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

