ಮುಡಾ ಪ್ರಕರಣ ರಾಜಕೀಯ ಪ್ರೇರಿತ ಅಂತ ಮೊದಲೇ ಹೇಳಿದ್ದೆ, ನ್ಯಾಯಾಲಯ ಹೇಳಿದ್ದನ್ನು ಪಾಲಿಸುತ್ತೇವೆ: ಶಿವಕುಮಾರ್

|

Updated on: Mar 07, 2025 | 7:48 PM

ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಮಾತಾಡಿದ ಶಿವಕುಮಾರ್, ಅರಣ್ಯ ಇಲಾಖೆಯಿಂದ ಕೆಲಸ ಮುಂದುವರಿಸಲು ಅನುಮತಿ ಸಿಗುತ್ತಿಲ್ಲ, ಅವರಿಗೆ ಸುಮಾರು 170 ಹೆಕ್ಟೇರ್ ಬದಲೀ ಜಮೀನನ್ನು ನೀಡಬೇಕಿದೆ, ಮಾರ್ಚ್ 18ರಂದು ದೆಹಲಿಗೆ ತೆರಳಿ ಕೇಂದ್ರ ಅರಣ್ಯ ಸಚಿವರೊಂದಿಗೆ ಚರ್ಚೆ ಮಾಡುತ್ತೇನೆ; ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ನೀರು ಕೊಟ್ಟೇ ಕೊಡುತ್ತೇವೆ ಎಂದು ಹೇಳಿದರು.

ಬೆಂಗಳೂರು, ಮಾರ್ಚ್​ 7 : ಮುಡಾ ಪ್ರಕರಣಕ್ಕೆ (MUDA case) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಪಾರ್ವತಿ ಸಿದ್ದರಾಮಯ್ಯ ಮತ್ತು ಸಚಿವ ಭೈರತಿ ಸುರೇಶ್ ಜಾರಿ ಮಾಡಿದ್ದ ಸಮನ್ಸ್ ಅನ್ನು ಹೈಕೋರ್ಟ್ ರದ್ದು ಮಾಡಿದೆ. ಈ ವಿಚಾರವವನ್ನು ಡಿಸಿಎಂ ಡಿಕೆ ಶಿವಕುಮಾರ್  ಗಮನಕ್ಕೆ ತಂದಾಗ, ತಮ್ಮ ಸರ್ಕಾರ ಯಾವತ್ತಿಗೂ ನ್ಯಾಯದ ಪರವಾಗಿ ಹೋರಾಟ ಮಾಡುತ್ತಾ ಬಂದಿದೆ, ಬೇರೆ ಕೇಸ್​ನಲ್ಲಿ ಕೂಡ ಸಮನ್ಸ್ ರದ್ದಾಗಿತ್ತು, ಕಾನೂನು ಮತ್ತು ನ್ಯಾಯಾಲಯ ಏನು ಹೇಳುತ್ತೋ ಅದನ್ನು ಪಾಲಿಸುತ್ತೇವೆ ಎಂದು ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಶಿವಕುಮಾರ್ ಆಡಿದ ಮಾತಗಳನ್ನು ಪದೇಪದೆ ವಿಶ್ಲೇಷಣೆ ಮಾಡೋದ್ರಲ್ಲಿ ಅರ್ಥವಿಲ್ಲ: ಶರತ್ ಲೋಹಿತಾಶ್ವ, ನಟ