AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿ ಓವರ್​ಗೆ 14.23 ರನ್: ಪಿಎಸ್​ಎಲ್​ನಲ್ಲಿ ಹೊಸ ಇತಿಹಾಸ

ಪ್ರತಿ ಓವರ್​ಗೆ 14.23 ರನ್: ಪಿಎಸ್​ಎಲ್​ನಲ್ಲಿ ಹೊಸ ಇತಿಹಾಸ

ಝಾಹಿರ್ ಯೂಸುಫ್
|

Updated on: Apr 04, 2026 | 11:27 AM

Share

Multan Sultans Vs Lahore Qalandars Highlights: ಲಾಹೋರ್ ಖಲಂದರ್ಸ್ ಪರ 28 ಎಸೆತಗಳನ್ನು ಎದುರಿಸಿದ ಮೊಹಮ್ಮದ್ ನಯೀಮ್ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ  60 ರನ್ ಚಚ್ಚಿದರು. ಇನ್ನು ಪರ್ವೇಜ್ ಹೊಸೈನ್ ಎಮನ: ಕೇವಲ 19 ಎಸೆತಗಳಲ್ಲಿ 5 ಸಿಕ್ಸರ್‌ಗಳ ನೆರವಿನಿಂದ 45 ರನ್ ಬಾರಿಸಿದರು. ಹಾಗೆಯೇ  ಅಬ್ದುಲ್ಲಾ ಶಫೀಕ್ 14 ಎಸೆತಗಳಲ್ಲಿ 33 ರನ್ ಕೊಡುಗೆ ನೀಡುವ ಮೂಲಕ ಲಾಹೋರ್ ಖಲಂದರ್ಸ್ ತಂಡದ ಸ್ಕೋರ್​ ಅನ್ನು 13 ಓವರ್​​ಗಳಲ್ಲಿ 185 ಕ್ಕೆ ತಂದು ನಿಲ್ಲಿಸಿದ್ದರು.

ಲಾಹೋರ್​ನ ಗದ್ದಾಫಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ್ ಸೂಪರ್ ಲೀಗ್​ನ 11ನೇ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ ತಂಡ ಮುಲ್ತಾನ್ ಸುಲ್ತಾನ್ಸ್ ವಿರುದ್ಧ 20 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಮಳೆಯಿಂದಾಗಿ 13 ಓವರ್‌ಗಳಿಗೆ ಸೀಮಿತಗೊಂಡಿದ್ದ ಈ ಪಂದ್ಯದಲ್ಲಿ ಲಾಹೋರ್ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿತು.

ಮೊದಲು ಬ್ಯಾಟಿಂಗ್ ಮಾಡಿದ ಲಾಹೋರ್ ಖಲಂದರ್ಸ್ ಕೇವಲ 13 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಪೇರಿಸಿತು. ಇದು ಪಿಎಸ್‌ಎಲ್ ಇತಿಹಾಸದಲ್ಲೇ ಅತ್ಯಧಿಕ ರನ್ ರೇಟ್ (14.23) ಹೊಂದಿದ ಇನ್ನಿಂಗ್ಸ್ ಎಂಬ ದಾಖಲೆಗೆ ಪಾತ್ರವಾಯಿತು.

ಲಾಹೋರ್ ಖಲಂದರ್ಸ್ ಪರ 28 ಎಸೆತಗಳನ್ನು ಎದುರಿಸಿದ ಮೊಹಮ್ಮದ್ ನಯೀಮ್ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ  60 ರನ್ ಚಚ್ಚಿದರು. ಇನ್ನು ಪರ್ವೇಜ್ ಹೊಸೈನ್ ಎಮನ: ಕೇವಲ 19 ಎಸೆತಗಳಲ್ಲಿ 5 ಸಿಕ್ಸರ್‌ಗಳ ನೆರವಿನಿಂದ 45 ರನ್ ಬಾರಿಸಿದರು. ಹಾಗೆಯೇ  ಅಬ್ದುಲ್ಲಾ ಶಫೀಕ್ 14 ಎಸೆತಗಳಲ್ಲಿ 33 ರನ್ ಕೊಡುಗೆ ನೀಡುವ ಮೂಲಕ ಲಾಹೋರ್ ಖಲಂದರ್ಸ್ ತಂಡದ ಸ್ಕೋರ್​ ಅನ್ನು 13 ಓವರ್​​ಗಳಲ್ಲಿ 185 ಕ್ಕೆ ತಂದು ನಿಲ್ಲಿಸಿದ್ದರು.

ಈ 186 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಮುಲ್ತಾನ್ ಸುಲ್ತಾನ್ಸ್ 13 ಓವರ್‌ಗಳಲ್ಲಿ 165 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ತಂಡದ ಪರ ನಾಯಕ ಆಷ್ಟನ್ ಟರ್ನರ್ ಕೇವಲ 22 ಎಸೆತಗಳಲ್ಲಿ ಅಜೇಯ 52 ರನ್ ಬಾರಿಸಿದರೂ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More