My India My Life Goals: ನಿಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಡಲು ನಟ ಅಭಿಮನ್ಯು ಸಿಂಗ್ ನೀಡುವ ಸಲಹೆ ಆಲಿಸಿ
ವಾಹನಗಳಿಂದಲೇ ಪರಿಸರ ಮಾಲಿನ್ಯ ಹೆಚ್ಚುತ್ತಿರುವುದರಿಂದ ಅದನ್ನು ಕಾಪಾಡಲು ವಾಹನಗಳ ವಾಯುಮಾಲಿನ್ಯ ಪರೀಕ್ಷೆಯನ್ನು ಮೇಲಿಂದ ಮೇಲೆ ಮಾಡಿಸುತ್ತಿರಬೇಕು ಎಂದು ಅಭಿಮನ್ಯು ಸಿಂಗ್ ಹೇಳುತ್ತಾರೆ.
ಬೆಂಗಳೂರು: ಮೊನ್ನೆಯಷ್ಟೇ ನಾವು ವಿಶ್ವ ಪರಿಸರ ದಿನವನ್ನು ಆಚರಿಸಿದೆವು (World Environment Day). ಆಚರಣೆ ಬೇರೆ ಮತ್ತು ಪಾಲನೆ ಬೇರೆ. ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛ, ಸುರಕ್ಷಿತ ಮತ್ತು ಆರೋಗ್ಯಕರವಾಗಿಡಲು ಎಲ್ಲರೂ ಕಾಂಟ್ರಿಬ್ಯೂಟ್ ಮಾಡಬಹುದಾಗಿದೆ. ಅದನ್ನು ಹೇಗೆಲ್ಲ ಮಾಡಬಹುದು ಅಂತ ಬಹುಭಾಷಾ ನಟ ಅಭಿಮನ್ಯು ಸಿಂಗ್ (Abhimanyu Singh) ಚಿಕ್ಕದಾಗಿ ಚೊಕ್ಕದಾಗಿ ವಿವರಿಸಿದ್ದಾರೆ. ಪರಿಸರವನ್ನು ಸ್ವಚ್ಛವಾಗಿಡಲು ಅವರು ಪ್ಲ್ಯಾಸ್ಟಿಕ್ ಬಳಕೆ ಮಾಡುವುದೇ ಇಲ್ಲ. ಎರಡನೇಯದಾಗಿ, ಶೂಟಿಂಗ್ ನಲ್ಲಿ (shooting) ತೊಡಗಿದ್ದರೂ ಸಮಯ ಸಿಕ್ಕಾಗಲೆಲ್ಲ ಒಂದೆರಡು ಸಸಿ ನೆಡುವ ಕೆಲಸವನ್ನು ಅವರು ಮಾಡುತ್ತಾರೆ. ಮೂರನೇಯದಾಗಿ ಸಿಂಗ್ ತಮ್ಮ ಗೆಳೆಯರಿಗೆ ಅವರವರ ವಾಹನಗಳ ಮಾಲಿನ್ಯ ಪರೀಕ್ಷೆ ಮಾಡಿಸವಂತೆ ತಾಕೀತು ಮಾಡುತ್ತಾರಂತೆ. ವಾಹನಗಳಿಂದಲೇ ಪರಿಸರ ಮಾಲಿನ್ಯ ಹೆಚ್ಚುತ್ತಿರುವುದರಿಂದ ಅದನ್ನು ಕಾಪಾಡಲು ವಾಹನಗಳ ವಾಯುಮಾಲಿನ್ಯ ಪರೀಕ್ಷೆಯನ್ನು ಮೇಲಿಂದ ಮೇಲೆ ಮಾಡಿಸುತ್ತಿರಬೇಕು ಎಂದು ಅಭಿಮನ್ಯು ಸಿಂಗ್ ಹೇಳುತ್ತಾರೆ. ಅವರು ಹೇಳುವ ವಿಧಾನ ಜಾರಿಗೆ ತರಲು ನಮಗೆ ತೊಂದರೆಯೇನೂ ಆಗಲಾರದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ