Double Decker Bus: ಬೆಸ್ಟ್ ಹೊಸ ಎಸಿ ಡಬಲ್-ಡೆಕ್ಕರ್ ಬಸ್ಗಳನ್ನು ರಸ್ತೆಗಳಿಸಿದೆ, ಆದರೆ ಜನ ಹಳೆ ಬಸ್ಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ!
ಹೊಸ ಎಸಿ ಡಬಲ್-ಡೆಕ್ಕರ್ ಬಸ್ಗಳು ಹೆಚ್ಚು ಆಕರ್ಷಕವಾಗಿದ್ದು ಹೆಚ್ಚು ವೇಗ ಮತ್ತು ಸಾಮರ್ಥ್ಯ ಹೊಂದಿವೆ ನಿಜ ಆದರೆ ಹಳೆ ಬಸ್ ಗಳಲ್ಲಿ ಸಿಗುತ್ತಿದ್ದ ಪ್ರಯಾಣದ ಅನುಭೂತಿ ಇವುಗಳಲ್ಲಿ ಸಿಗುತ್ತಿಲ್ಲ ಎಂದು ಮುಂಬೈ ನಿವಾಸಿಗಳು ಹೇಳುತ್ತಿದ್ದಾರೆ.
ಮುಂಬೈ: ಬೆಸ್ಟ್ ಎಂದೇ ಹೆಚ್ಚು ಜನಪ್ರಿಯವಾಗಿರುವ ಬೃಹನ್ಮುಂಬಯಿ ಎಲೆಕ್ಟ್ರಿಕ್ ಸಪ್ಲೈ ಮತ್ತು ಟ್ರಾನ್ಸ್ ಪೋರ್ಟ್ ಸಂಸ್ಥೆಯು (BEST) ಅತ್ಯಾಧುನಿಕ ವಾತಾನುಕೂಲಿತ ಡಬಲ್-ಡೆಕ್ಕರ್ ಬಸ್ (AC double-decker) ಗಳ ಸೇವೆಯನ್ನು ಆರಂಭಿಸಿದೆಯಾದರೂ, ಅಲ್ಲಿನ ಜನ ಅದರಲ್ಲೂ ವಿಶೇಷವಾಗಿ ಹಳಬರು ಮೊದಲಿನ ಬಸ್ಗಳಲ್ಲಿ ಪ್ರಯಾಣಿಸುವ ಆನಂದ ಮತ್ತು ರೋಮಾಂಚನವನ್ನು (excitement) ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹಳೆಯ ಡಬಲ್ ಡೆಕ್ಕರ್ ಬಸ್ ನ ಮುಂಭಾಗದಲ್ಲಿ ಕೂತು, ಬಸ್ಸು ಮುಂಬೈ ಮಹಾನಗರದ ವಾಹನಸಂದಣಿ ಮತ್ತು ಜನದಟ್ಟಣೆಯ ನಡುವೆ ಸರ್ಪದಂತೆ ತೆವಳುತ್ತ, ತೀಕ್ಷ್ಣವಾದ ತಿರುವುಗಳಲ್ಲಿ ತನ್ನ ಭಾರಿ ಗಾತ್ರವನ್ನು ಓರೆ ಮಾಡಿಕೊಂಡು ತಿರುಗುತ್ತಾ, ಹಾಗೂ ಪ್ರಯಾಣದುದ್ದಕ್ಕೂ ಬಸ್ನೊಳಗೆ ತೂರಿಬರುತ್ತಿದ್ದ ತಂಗಾಳಿ ನೀಡುತ್ತಿದ್ದ ಆಹ್ಲಾದತೆಯನ್ನು ಪ್ರತಿಯೊಬ್ಬ ಮುಂಬೈ ನಿವಾಸಿ ಮಿಸ್ ಮಾಡಿಕೊಳ್ಳುತ್ತಿದ್ದಾನೆ.
‘ನಾನು 1990 ರಿಂದ ಡಬಲ್-ಡೆಕ್ಕರ್ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದೇನೆ. ಪ್ರಯಾಣಿಸುವಾಗ ಆರಿಸಿಕೊಳ್ಳಲು ಹಲವಾರು ಸೀಟುಗಳು ಲಭ್ಯವಿರುತ್ತಿದ್ದ ಕಾರಣ ಪ್ರಯಾಣ ಮೋಜಿನದಾಗಿರುತಿತ್ತು. ಮುಂದಿನ ಸೀಟು ಸಿಕ್ಕಾಗ ತೂರಿ ಬರುತ್ತಿದ್ದ ತಂಗಾಳಿ ನಮ್ಮ ಮೈಮನಸ್ಸುಗಳನ್ನು ಮುದಗೊಳಿಸುತಿತ್ತು. ಅತಿಶಯವಾದ ಅನುಭವ ಅದು,’ ಎಂದು ರಾಜು ಪವಾರ್ ಹೆಸರಿನ ಪ್ರಯಾಣಿಕ ಹೇಳುತ್ತಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಮೆರಿಕಾ ಕಾನ್ಸುಲೇಟ್ ಕಚೇರಿ ಆರಂಭಿಸಲು ಬ್ಲಿಂಕನ್ಗೆ ಮನವಿ ಸಲ್ಲಿಸುತ್ತೇನೆ: ವಿದೇಶಾಂಗ ಸಚಿವ ಜೈಶಂಕರ್
‘ಬೇಸಿಗೆ ದಿನಗಳಲ್ಲಿ ಪ್ರಯಾಣಿಸುವಾಗ ಬೆವತು ಬಿಡುತ್ತಿದ್ದೆವು, ಆದರೆ ಬಸ್ಸಿನ ಮುಂಭಾಗದ ಸೀಟು ಸಿಕ್ಕಾಗ ತೂರಿಬರುತ್ತಿದ್ದ ತಂಗಾಳಿ ನಮ್ಮನ್ನು ಆಹ್ಲಾದಗೊಳಿಸಿ ತಾಜಾತನದ ಭಾವನೆ ಮೂಡಿಸುತ್ತಿತ್ತು,’ ಎಂದು ಇನ್ನೊಬ್ಬ ಪ್ರಯಾಣಿಕ ಹರೀಶ್ ನಾಯಕ್ ಹೇಳುತ್ತಾರೆ.
ಹೊಸ ಎಸಿ ಡಬಲ್-ಡೆಕ್ಕರ್ ಬಸ್ಗಳು ಹೆಚ್ಚು ಆಕರ್ಷಕವಾಗಿದ್ದು ಹೆಚ್ಚು ವೇಗ ಮತ್ತು ಸಾಮರ್ಥ್ಯ ಹೊಂದಿವೆ ನಿಜ ಆದರೆ ಹಳೆ ಬಸ್ ಗಳಲ್ಲಿ ಸಿಗುತ್ತಿದ್ದ ಪ್ರಯಾಣದ ಅನುಭೂತಿ ಇವುಗಳಲ್ಲಿ ಸಿಗುತ್ತಿಲ್ಲ ಎಂದು ಮುಂಬೈ ನಿವಾಸಿಗಳು ಹೇಳುತ್ತಿದ್ದಾರೆ.
‘ಹೊಸ ಬಸ್ ಗಳು ಹಳೆ ಬಸ್ ಗಳಂತಿಲ್ಲ. ಹಳೆ ಬಸ್ ಗಳಲ್ಲಿನ ಪ್ರಯಾಣ ನಮಗೆ ಬಹಳ ಸಂತೋಷ ನೀಡುತಿತ್ತು. ಅವು ಗಳಲ್ಲಿ ಪ್ರಯಾಣಿಸಲು ನಾವು ಶಾಲೆಗೆ ಚಕ್ಕರ್ ಹೊಡೆದಿದ್ದೂ ಉಂಟು. ಹಳೆಯ ಬಸ್ ಗಳಲ್ಲಿ ಗಾಜಿನ ಕಿಟಕಿಗಳು ಇಲ್ಲದಿದ್ದ ಕಾರಣ ಪ್ರಯಾಣ ಮೋಜು ನೀಡುತಿತ್ತು,’ ಎಂದು ದಿಲೇಶ್ ಪರಾಢಿ ಹೆಸರಿನ ಪ್ರಯಾಣಿಕ ಹೇಳುತ್ತಾರೆ.
ಇದನ್ನೂ ಓದಿ: ಸೇನಾ ಅಭ್ಯಾಸದ ವೇಳೆ 3 ಕ್ಷಿಪಣಿಗಳು ಮಿಸ್‌ಫೈರ್, ತನಿಖೆಗೆ ಆದೇಶ ನೀಡಿದ ಸೇನೆ
ಹಳೆ ಡಬಲ್ ಡೆಕ್ಕರ್ ಬಸ್ ಗಳ ಪೈಕಿ ಈಗ ಕೇವಲ 50 ಮಾತ್ರ ರಸ್ತೆಗಳ ಮೇಲೆ ಸಂಚರಿಸುತ್ತಿವೆ. ಮೊದಲು ಇವುಗಳ ಸಂಖ್ಯೆ 900 ಆಗಿತ್ತು. ಈ 50 ಬಸ್ ಗಳು ಕೂಡ ಶೀಘ್ರದಲ್ಲಿ ರಿಟೈರ್ ಆಗಲಿವೆ. ಬಿಇಎಸ್ ಟಿ ಸಂಸ್ಥೆ ಎಲ್ಲ ಹಳೆಯ ಡಬಲ್-ಡೆಕ್ಕರ್ ಬಸ್ ಗಳನ್ನು ಬದಲಾಯಿಸುವ ನಿರ್ಧಾರ ಮಾಡಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ