ಪರೀಕ್ಷಾ ಸಂಚಾರದ ವೇಳೆ ಹಳಿಯಿಂದ ವಾಲಿದ ಮುಂಬೈ ಮೋನೋರೈಲ್
ಮುಂಬೈನಲ್ಲಿ ಇಂದು ಬೆಳಿಗ್ಗೆ ವಡಾಲಾ ಡಿಪೋದಲ್ಲಿ ಪರೀಕ್ಷಾರ್ಥ ಸಂಚಾರದ ಸಮಯದಲ್ಲಿ ಮೋನೋರೈಲ್ ರೈಲು ಹಳಿಯಿಂದ ವಾಲಿದೆ. ಅದೃಷ್ಟವಶಾತ್ ರೈಲಿನೊಳಗೆ ಯಾವುದೇ ಪ್ರಯಾಣಿಕರು ಇರಲಿಲ್ಲ. ಈ ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ. ಇಬ್ಬರು ಸಿಬ್ಬಂದಿಯನ್ನು ಮೋನೋರೈಲಿನಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈ, ನವೆಂಬರ್ 5: ಮಹಾರಾಷ್ಟ್ರದ (Maharashtra) ವಡಾಲಾದಲ್ಲಿ ಇಂದು ಬೆಳಿಗ್ಗೆ ಡಿಪೋದ ಹೊರಗೆ ಪರೀಕ್ಷಾರ್ಥ ಸಂಚಾರದ ಸಮಯದಲ್ಲಿ ಮುಂಬೈ ಮೊನೊರೈಲಿನ (monorail train) ಒಂದು ಭಾಗ ಹಳಿ ತಪ್ಪಿದೆ. ತಕ್ಷಣ ತುರ್ತು ಕ್ರಮ ಕೈಗೊಳ್ಳಲಾಯಿತು. ಪರೀಕ್ಷಾರ್ಥ ಮೋನೋರೈಲು ಸಂಚಾರ ನಡೆಸುತ್ತಿದ್ದುದರಿಂದಾಗಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಈ ಘಟನೆಯಲ್ಲಿ ಗಾಯಗೊಂಡಿದ್ದ ಓರ್ವ ಸಿಬ್ಬಂದಿ ಸೇರಿ ಒಟ್ಟು ಇಬ್ಬರು ಸಿಬ್ಬಂದಿಯನ್ನು ಮೋನೋರೈಲಿನಿಂದ ರಕ್ಷಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ