ನಟ ಸಲ್ಮಾನ್ ಖಾನ್ಗೆ ಜೀವಬೆದರಿಕೆ ಸಂದೇಶ, ರಾಯಚೂರು ಯುವಕ ಮುಂಬೈ ಪೊಲೀಸ್ ವಶಕ್ಕೆ
ಸೊಹೇಲ್ ಪಾಶಾನ ತಾಯಿ ಹೇಳುವ ಪ್ರಕಾರ ಅವರಿಗಿರುವ ಇಬ್ಬರು ಮಕ್ಕಳಲ್ಲಿ ಸೊಹೇಲ್ ಹಿರಿಯ, ಕೇವಲ ಎಂಟನೇ ಕ್ಲಾಸ್ವೆರೆಗೆ ಮಾತ್ರ ಓದಿರುವ ಅವನು ಸಲ್ಮಾನ್ ಖಾನ್ ಕಟ್ಟಾ ಅಭಿಮಾನಿ, ಕೇವಲ ಸಲ್ಮಾನ್ ಸಿನಿಮಾಗಳನ್ನು ನೋಡುವ ಅವನು ಜೀವಬೆದರಿಕೆಯ ಮೆಸೇಜ್ ಯಾಕೆ ಕಳಿಸಿಯಾನು? ಎಂದು ಆಕೆ ಕೇಳುತ್ತಾರೆ.
ರಾಯಚೂರು: ಎಲ್ಲಿಯ ಸಲ್ಮಾನ್ ಖಾನ್ ಎಲ್ಲಿ ಮಾನ್ವಿಯ ಸೊಹೇಲ್ ಪಾಶಾ? ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಜೀವಬೆದರಿಕೆಯೊಡ್ಡಿರುವ ಅರೋಪದಲ್ಲಿ ಮುಂಬೈ ಪೊಲೀಸರು ಜಿಲ್ಲೆಯ ಮಾನ್ವಿ ಪಟ್ಟಣದ ನಿವಾಸಿ ಸೊಹೇಲ್ ಪಾಶಾನನ್ನು ವಶಕ್ಕೆ ಪಡೆದು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ರಾಯಚೂರು ಜಿಲ್ಲಾ ಪೊಲೀಸರ ನೆರವಿನಿಂದ ಸೊಹೇಲ್ ನನ್ನು ಬಂಧಿಸಲಾಗಿದೆ. ತನ್ನ ಮಗ ಗ್ಯಾರೇಜೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾನೆ, ಅವನು ಅಮಾಯಕ, ಪೊಲೀಸರು ಯಾಕೆ ಬಂಧಿಸಿದ್ದಾರೋ ಗೊತ್ತಿಲ್ಲವೆಂದು ಸೊಹೇಲ್ ತಾಯಿ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Salman Khan Death Threat: ‘ಏಪ್ರಿಲ್ 30ಕ್ಕೆ ಸಲ್ಮಾನ್ ಖಾನ್ನ ಮುಗಿಸ್ತೀವಿ’; ಸಲ್ಲುಗೆ ಬಂತು ಮತ್ತೊಂದು ಬೆದರಿಕೆ ಕರೆ
Loading...
Unable to load recommendations.
Follow Us