ಕಣ್ಣಿಗೆ ಕಂಡವರಿಗೆಲ್ಲಾ ಎಗರಿ.. ಎಗರಿ ಕಚ್ಚಿದ ನಾಯಿ: ಅಬ್ಬಾಬ್ಬ ಭಯಾನಕ ವಿಡಿಯೋ ಇಲ್ಲಿದೆ ನೋಡಿ

Updated on: Apr 04, 2026 | 4:45 PM

ಮುಂಬೈನಲ್ಲಿ ರೇಬಿಸ್ ರೋಗಗ್ರಸ್ತ ನಾಯಿಯೊಂದು ಸಾರ್ವಜನಿಕರ ಮೇಲೆ ದಾಳಿ ಮಾಡಿರುವ ಭೀಕರ ದೃಶ್ಯ ವೈರಲ್ ಆಗಿದೆ. ಕೇವಲ 30 ಸೆಕೆಂಡುಗಳಲ್ಲಿ ನಾಲ್ಕೈದು ಜನರನ್ನು ಕಚ್ಚಿ ಗಾಯಗೊಳಿಸಿದೆ. ರೇಬಿಸ್ ಸೋಂಕಿತ ಪ್ರಾಣಿಗಳಲ್ಲಿ ಇಂತಹ ಆಕ್ರಮಣಕಾರಿ ಸ್ವಭಾವ ಸಾಮಾನ್ಯ. ಈ ಘಟನೆ ರೇಬಿಸ್ ಅಪಾಯ ಮತ್ತು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಗಂಭೀರ ಎಚ್ಚರಿಕೆ ನೀಡುತ್ತದೆ, ತಡೆಗಟ್ಟುವ ಕ್ರಮಗಳ ಅವಶ್ಯಕತೆಯನ್ನು ಒತ್ತಿಹೇಳುತ್ತದೆ.

ಮುಂಬೈ, ಏ. 4: ರೇವಿಸ್ ಎಂಬ ಮಾರಕ ಕಾಯಿಲೆಗೆ ತುತ್ತಾದ ಪ್ರಾಣಿ ಎಷ್ಟು ಅಪಾಯಕಾರಿ ಆಗಬಲ್ಲದು ಎಂಬುದು ಈ ಇತ್ತೀಚಿನ ವಿಡಿಯೋ ಮೂಲಕ ಸಾಬೀತಾಗಿದೆ. ಸಾರ್ವಜನಿಕ ಸ್ಥಳವೊಂದರಲ್ಲಿ ನಾಯಿಯೊಂದು ವಿವೇಚನೆ ಇಲ್ಲದೆ ಅಲ್ಲಿರುವ ಪ್ರತಿಯೊಬ್ಬರ ಮೇಲೆ ದಾಳಿ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಕಂಡುಬರುವಂತೆ, ನಾಯಿಯೊಂದು ಅತಿ ವೇಗವಾಗಿ ಓಡಿಬಂದು ಅಲ್ಲಿ ನಿಂತಿದ್ದ ಯುವಕರ ಮೇಲೆ ದಾಳಿ ಮಾಡುತ್ತದೆ. ಕೇವಲ 30 ಸೆಕೆಂಡ್‌ಗಳ ಅಂತರದಲ್ಲಿ ಆ ನಾಯಿ ಸುಮಾರು ನಾಲ್ಕೈದು ಜನರನ್ನು ಕಚ್ಚಿ ಗಾಯಗೊಳಿಸಿದೆ. ರೇವಿಸ್ ಸೋಂಕಿಗೆ ಒಳಗಾದ ನಾಯಿಗಳಲ್ಲಿ ಇಂತಹ ಅತಿಯಾದ ಆಕ್ರಮಣಕಾರಿ ಸ್ವಭಾವ (Furious Rabies) ಕಂಡುಬರುತ್ತದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More