Video: ಮುಂಡಗಾರು: ನಕ್ಸಲ್ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಪೇಜಾವರ ಶ್ರೀ
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚುತ್ತಿರುವ ಬೆನ್ನಲ್ಲೇ ಪೇಜಾವರ ಶ್ರೀಗಳು ನಕ್ಸಲ್ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಶನಿವಾರ ಪೇಜಾವರ ಶ್ರೀಗಳು ಚಿಕ್ಕಮಗಳೂರಿನ ಮುಂಡಗಾರಿಗೆ ಭೇಟಿ ನೀಡಿದಾಗ ಅಲ್ಲಿನ ಗ್ರಾಮಸ್ಥರು ಭಕ್ತಿ ಆದರದಿಂದ ಬರಮಾಡಿಕೊಂಡರು. ಮೈಲುದೂರ ನೂರಾರು ಮಹಿಳೆಯರು, ಪುರುಷರು ರಾಮಮಂತ್ರ ಘೋಷ ಭಜನೆಗಳೊಂದಿಗೆ ಪೂರ್ಣ ಕುಂಭಗಳ ಸಹಿತ ಶ್ರೀಗಳವರನ್ನು ಕಾಲ್ನಡಿಗೆಯಲ್ಲಿ ವನಮೆರವಣಿಗೆ ನಡೆಸಿ ಬರಮಾಡಿಕೊಂಡರು. ಗಿರಿಜನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಶ್ವಪ್ರಸನ್ನ ಶ್ರೀಗಳು, ಗಿರಿಜನರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ಈ ಗ್ರಾಮವು ಮೂಲಸೌಕರ್ಯಗಳಿಂದ ವಂಚಿತವಾಗಿದೆ.
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚುತ್ತಿರುವ ಬೆನ್ನಲ್ಲೇ ಪೇಜಾವರ ಶ್ರೀಗಳು ನಕ್ಸಲ್ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಶನಿವಾರ ಪೇಜಾವರ ಶ್ರೀಗಳು ಚಿಕ್ಕಮಗಳೂರಿನ ಮುಂಡಗಾರಿಗೆ ಭೇಟಿ ನೀಡಿದಾಗ ಅಲ್ಲಿನ ಗ್ರಾಮಸ್ಥರು ಭಕ್ತಿ ಆದರದಿಂದ ಬರಮಾಡಿಕೊಂಡರು. ಮೈಲುದೂರ ನೂರಾರು ಮಹಿಳೆಯರು, ಪುರುಷರು ರಾಮಮಂತ್ರ ಘೋಷ ಭಜನೆಗಳೊಂದಿಗೆ ಪೂರ್ಣ ಕುಂಭಗಳ ಸಹಿತ ಶ್ರೀಗಳವರನ್ನು ಕಾಲ್ನಡಿಗೆಯಲ್ಲಿ ವನಮೆರವಣಿಗೆ ನಡೆಸಿ ಬರಮಾಡಿಕೊಂಡರು.
ಗಿರಿಜನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಶ್ವಪ್ರಸನ್ನ ಶ್ರೀಗಳು, ಗಿರಿಜನರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ಈ ಗ್ರಾಮವು ಮೂಲಸೌಕರ್ಯಗಳಿಂದ ವಂಚಿತವಾಗಿದೆ.
ಮುಂದಿನ ದಿನಗಳಲ್ಲೂ ಶ್ರೀಮಠ ಗಿರಿಜನ ಬಂಧುಗಳ ನೆಮ್ಮದಿಯ ಬದುಕಿಗೆ ಸದಾ ಸ್ಪಂದಿಸಲಿದೆ. ಮಕ್ಕಳಿಗೆ ಸಾಧ್ಯವಾದಷ್ಟು ಉತ್ತಮ ಶಿಕ್ಷಣ, ಸಂಸ್ಕಾರಗಳನ್ನು ನೀಡಿ ಬೆಳೆಸುವಂತೆಯೂ ಶ್ರೀಗಳು ಕಿವಿಮಾತು ಹೇಳಿ ಎಲ್ಲರಿಗೂ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ


