‘ಹೊಸ ಜೀವನ ಸಿಕ್ಕಿದೆ’; ಅಪಘಾತದ ನಂತರ ಮುಶೀರ್ ಖಾನ್ ಮೊದಲ ಮಾತು
Musheer Khan: ನನಗೆ ಈ ಹೊಸ ಜೀವನ ನೀಡಿದ ದೇವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈಗ ನಾನು ಸದ್ಯಕ್ಕೆ ಚೆನ್ನಾಗಿದ್ದೇನೆ. ಅಪಘಾತದ ವೇಳೆ ನನ್ನ ಜೊತೆಯಲ್ಲಿದ್ದ ನನ್ನ ತಂದೆ ಕೂಡ ಆರೋಗ್ಯವಾಗಿದ್ದಾರೆ. ನಿಮ್ಮ ಪ್ರಾರ್ಥನೆಗಳಿಗೆ ತುಂಬಾ ಧನ್ಯವಾದಗಳು ಎಂದಿದ್ದಾರೆ.
ಸೆಪ್ಟೆಂಬರ್ 28 ರಂದು ಉತ್ತರ ಪ್ರದೇಶದಿಂದ ಲಕ್ನೋಗೆ ತೆರೆಳುತ್ತಿರುವಾಗ ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಮುಶೀರ್ ಖಾನ್ ಕಾರು ಅಪಘಾತಕ್ಕೀಡಾಗಿದ್ದರು. ಈ ಅಪಘಾತದಲ್ಲಿ ಮುಶೀರ್ ಅವರ ಕುತ್ತಿಗೆಯ ಬಾಗಕ್ಕೆ ತೀವ್ರ ಗಾಯಗಳಾಗಿದ್ದವು. ಹೀಗಾಗಿ ಅವರನ್ನು ಕೂಡಲೇ ಲಕ್ನೋದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಬಳಿಕ ಮುಶೀರ್ ಖಾನ್ ಅವರ ಸದ್ಯದ ಪರಿಸ್ಥಿತಿಯ ಬಗ್ಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದ ಮೇದಾಂತ ಆಸ್ಪತ್ರೆ, ಮುಶೀರ್ ಖಾನ್ ಅವರ ಆರೋಗ್ಯ ಸದ್ಯಕ್ಕೆ ಸ್ಥಿರವಾಗಿದೆ ಎಂಬ ಮಾಹಿತಿ ನೀಡಿತ್ತು. ಇದೀಗ ಅಪಘಾತಕ್ಕೀಡಾದ ಒಂದು ದಿನದ ಬಳಿಕ ಸ್ವತಃ ಮುಶೀರ್ ಖಾನ್ ಅವರೇ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
‘ಹೊಸ ಜೀವನ ಸಿಕ್ಕಿದೆ’; ಮುಶೀರ್ ಖಾನ್
ಕಾರು ಅಪಘಾತದ ನಂತರ ತಮ್ಮ ಸ್ಥಿತಿಯ ಬಗ್ಗೆ ಮಾತನಾಡಿರುವ ಮುಶೀರ್ ಖಾನ್, ‘ನನಗೆ ಈ ಹೊಸ ಜೀವನ ನೀಡಿದ ದೇವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈಗ ನಾನು ಸದ್ಯಕ್ಕೆ ಚೆನ್ನಾಗಿದ್ದೇನೆ. ಅಪಘಾತದ ವೇಳೆ ನನ್ನ ಜೊತೆಯಲ್ಲಿದ್ದ ನನ್ನ ತಂದೆ ಕೂಡ ಆರೋಗ್ಯವಾಗಿದ್ದಾರೆ. ನಿಮ್ಮ ಪ್ರಾರ್ಥನೆಗಳಿಗೆ ತುಂಬಾ ಧನ್ಯವಾದಗಳು ಎಂದಿದ್ದಾರೆ. ಇದೇ ವೇಳೆ ಮುಶೀರ್ ತಂದೆ ನೌಶಾದ್ ಮಾತನಾಡಿ, ಈ ಹೊಸ ಜೀವನ ನೀಡಿದ ದೇವರಿಗೆ ಮೊದಲು ಕೃತಜ್ಞತೆ ಸಲ್ಲಿಸುತ್ತೇನೆ. ಅದೇ ಸಮಯದಲ್ಲಿ, ನಮಗಾಗಿ ಪ್ರಾರ್ಥಿಸಿದ ಎಲ್ಲರಿಗೂ, ನಮ್ಮ ಹಿತೈಷಿಗಳಿಗೆ, ನಮ್ಮ ಅಭಿಮಾನಿಗಳಿಗೆ ನಾವು ಧನ್ಯವಾದ ಹೇಳುತ್ತೇವೆ. ಹಾಗೆಯೇ ಮುಶೀರ್‌ನ ಸಂಪೂರ್ಣ ಕಾಳಜಿ ವಹಿಸುತ್ತಿರುವ ನಮ್ಮ ಎಮ್ಸಿಎ ಮತ್ತು ಬಿಸಿಸಿಐಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ