Siddaramaiah: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗೋದು ಖಾತ್ರಿಯಾಗುತ್ತಿದ್ದಂತೆಯೇ ಮುಸಲ್ಮಾನರಿಂದ ಸಂಭ್ರಮಾಚರಣೆ!

Siddaramaiah: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗೋದು ಖಾತ್ರಿಯಾಗುತ್ತಿದ್ದಂತೆಯೇ ಮುಸಲ್ಮಾನರಿಂದ ಸಂಭ್ರಮಾಚರಣೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 17, 2023 | 1:18 PM

ಪ್ರಾರ್ಥನೆ ಸಲ್ಲಿಸಿದ ಬಳಿಕ ಅವರೆಲ್ಲ ದರ್ಗಾದ ಹೊರಗಡೆ ಬಂದು ಬಡವರ ಬಂಧು ಸಿದ್ರಾಮಣ್ಣಂಗೆ ಜೈ ಅಂತ ಘೋಷಣೆ ಕೂಗಿದರು.

ತುಮಕೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅಂತ ಹೆಚ್ಚು ಕಡಿಮೆ ಖಚಿತವಾಗುತ್ತಿದ್ದಂತೆಯೇ ಅವರ ಅಭಿಮಾನಿಗಳು, ಅದರಲ್ಲೂ ವಿಶೇಷವಾಗಿ ಮುಸ್ಲಿಂ ಸಮುದಾಯದ (Muslim community) ಜನ ರಾಜ್ಯದೆಲ್ಲೆಡೆ ಸಂಭ್ರಮ ಆಚರಿಸುತ್ತಿದ್ದಾರೆ. ನಗರದ ಟೌನ್ ಹಾಲ್ ಬಳಿ ಇರುವ ಹಜರತ್ ಹುಸ್ಸೇನ್ ಬಾಷಾ ದರ್ಗಾದಲ್ಲಿ (Hazarath Hussain Basha Dargah) ಸ್ಥಳೀಯ ಮುಸ್ಲಿಂ ಜನ ಹಜರತ್ ಅವರ ಗೋರಿಯ ಮೇಲೆ ಚಾದರ್ ಹೊದಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಹಳಷ್ಟು ಜನರ ಕೈಗಳಲ್ಲಿ ಸಿದ್ದರಾಮಯ್ಯನವರ ದೊಡ್ಡ ದೊಡ್ಡ ಭಾವಚಿತ್ರಗಳಿದ್ದವು. ಪ್ರಾರ್ಥನೆ ಸಲ್ಲಿಸಿದ ಬಳಿಕ ಅವರೆಲ್ಲ ದರ್ಗಾದ ಹೊರಗಡೆ ಬಂದು ಬಡವರ ಬಂಧು ಸಿದ್ರಾಮಣ್ಣಂಗೆ ಜೈ ಅಂತ ಘೋಷಣೆ ಕೂಗಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ