AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉರ್ದು ಮಾತಾಡದಿದ್ದರೆ ಕೊಲ್ಲುವುದು ಮುಸ್ಲಿಮರ ಕ್ರೌರ್ಯ ಮತ್ತು ನೀಚ ಮನಸ್ಥಿತಿ ಬಿಂಬಿಸುತ್ತದೆ: ಪ್ರಮೋದ್ ಮುತಾಲಿಕ್

ಉರ್ದು ಮಾತಾಡದಿದ್ದರೆ ಕೊಲ್ಲುವುದು ಮುಸ್ಲಿಮರ ಕ್ರೌರ್ಯ ಮತ್ತು ನೀಚ ಮನಸ್ಥಿತಿ ಬಿಂಬಿಸುತ್ತದೆ: ಪ್ರಮೋದ್ ಮುತಾಲಿಕ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on:Apr 06, 2022 | 11:58 PM

Share

ಅವರ ಮಾತನ್ನೇ ನಾವೆಲ್ಲ ನಂಬುವುದಾದರೆ, ಗೋರಿಪಾಳ್ಯ, ಸುಲ್ತಾನಪಾಳ್ಯ, ತಿಲಕ್ ನಗರ, ಶಿವಾಜಿನಗರ ಮುಂತಾದ ಪ್ರದೇಶಗಳಲ್ಲಿ ಕೇವಲ ಮುಸ್ಲಿಂ ಜನ ವಾಸವಾಗಿದ್ದಾರೆ, ಹಿಂದೂ ಕುಟುಂಬಗಳು ಅಲ್ಲಿಲ್ಲ!

ಗೋರಿಪಾಳ್ಯದಲ್ಲಿ ಸೋಮವಾರ ಮಧ್ಯರಾತ್ರಿ ನಡೆದ ಚಂದ್ರುನ ಕೊಲೆ ಬಗ್ಗೆ ಜನ ರಾಜಕೀಯ ಧುರೀಣರು ಮತ್ತು ಹಿಂದೂ ಸಂಘಟನೆಗಳ ಮುಖಂಡರು ತಮಗೆ ಅನುಕೂಲವಾಗುವ ರೀತಿಯಲ್ಲಿ ವ್ಯಾಖ್ಯಾನಿಸಲಾರಂಭಿಸಿದ್ದಾರೆ. ಇದನ್ನು ಮೊದಲು ಆರಂಭಿಸಿದವರು ನಮ್ಮ ಗೃಹ ಸಚಿವ ಅರಗ ಜ್ಞಾನೇಂದ್ರ (Araga Jnanendra) ಅವರು. ಪೊಲೀಸರು ನೀಡಿದ ಹೇಳಿಕೆಗೆ ತದ್ವಿರುದ್ಧವಾದ ಹೇಳಿಕೆಯನ್ನು ನೀಡಿ ಅವರು ಗೊಂದಲ ಸೃಷ್ಟಿಸಿದರು. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿಯವರು (CT Ravi) ಸಹ ಗೃಹಸಚಿವರು ಹೇಳಿದ್ದನ್ನೇ ಪುನರುಚ್ಛರಿಸಿದರು. ಧಾರವಾಡದಲ್ಲಿ ಕೂತು ಬೆಂಗಳೂರಿನ ವಿದ್ಯಮಾನಗಳ ಬಗ್ಗೆ ತಾವೇ ಕಣ್ಣಾರೆ ಕಂಡಂತೆ ಹೇಳುವ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಅವರು ಸಹ ಚಂದ್ರು ಕೊಲೆ ಬಗ್ಗೆ ರವಿ ಮತ್ತು ಗೃಹ ಸಚಿವರು ಹೇಳಿದ್ದನ್ನೇ ಪುನರಾವರ್ತಿಸುವ ಒಂದು ವಿಡಿಯೋ ಮಾಡಿ ಮಾಧ್ಯಮಗಳಿಗೆ ರಿಲೀಸ್ ಮಾಡಿದ್ದಾರೆ.

ಅವರು ಹೇಳುವುದನ್ನು ಗಮನವಿಟ್ಟು ಕೇಳಿ. ಬೆಂಗಳೂರಿನ ಗೋರಿಪಾಳ್ಯ, ಸುಲ್ತಾನಪಾಳ್ಯ, ತಿಲಕ್ ನಗರ, ಶಿವಾಜಿನಗರ ಮೊದಲಾದ ಮುಸ್ಲಿಮರು ಜಾಸ್ತಿ ಇರುವ ಪ್ರದೇಶಗಳಲ್ಲಿ ಮುಸ್ಲಿಮೇತರು ಕನ್ನಡ ಮಾತಾಡುವಂತಿಲ್ಲ, ಉರ್ದು ಭಾಷೆಯೇ ಮಾತಾಡಬೇಕೆಂದು ಅವರು ಒತ್ತಡ ಹೇರುತ್ತಾರೆ. ಉರ್ದು ಮಾತಾಡುವವರಿಗೆ ಮಾತ್ರ ಸದರಿ ಪ್ರದೇಶಗಳಲ್ಲಿ ಪ್ರವೇಶಿಸಲು ಬಿಡುತ್ತಾರೆ ಎಂದು ಅವರು ಹೇಳುತ್ತಾರೆ.

ಅವರ ಮಾತನ್ನೇ ನಾವೆಲ್ಲ ನಂಬುವುದಾದರೆ, ಗೋರಿಪಾಳ್ಯ, ಸುಲ್ತಾನಪಾಳ್ಯ, ತಿಲಕ್ ನಗರ, ಶಿವಾಜಿನಗರ ಮುಂತಾದ ಪ್ರದೇಶಗಳಲ್ಲಿ ಕೇವಲ ಮುಸ್ಲಿಂ ಜನ ವಾಸವಾಗಿದ್ದಾರೆ, ಹಿಂದೂ ಕುಟುಂಬಗಳು ಅಲ್ಲಿಲ್ಲ! ರಾಮ ಮಂದಿರ ನಿರ್ಮಾಣಕ್ಕೆ ಧನ ಸಂಗ್ರಹ ಮಾಡುವ ಸಂದರ್ಭದಲ್ಲಿ ರಾಮನ ರಥ ತಿಲಕ್ ನಗರ ಪ್ರವೇಶಿಸಿದಾಗ ಅದರ ಮೇಲೆ ಮುಸ್ಲಿಂ ಜನ ಅಕ್ರಮಣ ಮಾಡಿದ್ದರು ಅಂತ ಅವರು ಹೇಳುತ್ತಾರೆ.

ಇಂಥ ಹಿನ್ನೆಲೆಯ ಪ್ರದೇಶವೊಂದರಲ್ಲಿ ಪ್ರವೇಶಿಸಿದ್ದ ಚಂದ್ರು ತನಗೆ ಉರ್ದು ಬರೋದಿಲ್ಲ ಅಂತ ಹೇಳಿದ ಕಾರಣ ಅವನನ್ನು ಕೊಲೆ ಮಾಡಲಾಗಿದೆ, ಎಂಥ ನೀಚ ಕೃತ್ಯ ಇದು, ಇದನ್ನು ಎಲ್ಲರೂ ಉಗ್ರವಾಗಿ ಖಂಡಿಸಲೇಬೇಕು, ಅವರು ಏನಂದುಕೊಂಡಿದ್ದಾರೆ? ಯಾವ ದೇಶದಲ್ಲಿ ನಾವಿದ್ದೇವೆ, ಅವರ ತಾಲಿಬಾನಿ ಮನಸ್ಥಿತಿಯನ್ನ ಸರ್ಕಾರ ಹದ್ದುಬಸ್ತನಲ್ಲಿಡಲೇ ಬೇಕು ಇಲ್ಲದಿದ್ದರೆ ದೊಡ್ಡ ಅನಾಹುತಗಳಾಗುತ್ತವೆ ಎಂದು ಮುತಾಲಿಕ್ ಹೇಳುತ್ತಾರೆ.

ಅಂದಹಾಗೆ, ಗೃಹ ಸಚಿವರು ತಮ್ಮ ಹೇಳಿಕೆಯನ್ನು ಬದಲಾಯಿಸಿ, ಉರ್ದು ಮಾತಾಡದೇ ಹೋಗಿದ್ದಕ್ಕೆ ನಡೆದ ಕೊಲೆ ಇದಲ್ಲ ಎಂದಿದ್ದಾರೆ. ಪ್ರಮೋದ್ ಮುತಾಲಿಕ್ ಅವರೂ ತಮ್ಮ ಹೇಳಿಕೆಯನ್ನು ಬದಲಾಯಿಸುತ್ತಾರೆಯೇ?

ಇದನ್ನೂ ಓದಿ:  ಅಧಿಕಾರಿಗಳು ಗೃಹ ಸಚಿವರಿಗೆ ಹೀಗೆ ಮಾಹಿತಿಯನ್ನೇ ನೀಡಿಲ್ಲ; ಚಂದ್ರು ಕೊಲೆ ಪ್ರಕರಣದಲ್ಲಿ ಆರಗ ಜ್ಞಾನೇಂದ್ರ ಯುಟರ್ನ್!

Published on: Apr 06, 2022 11:05 PM