ರಾಜಣ್ಣನ ಮಾತಿನಿಂದ ನಮ್ಮ ತಂದೆಯ ಆಯಸ್ಸು ಹೆಚ್ಚಾಗುತ್ತದೆಯೇ ಹೊರತು ಕಮ್ಮಿಯಾಗಲ್ಲ: ಹೆಚ್ ಡಿ ರೇವಣ್ಣ
ರಾಜಣ್ಣನ ಮಾತಿನಿಂದ ದೇವೇಗೌಡರ ಆಯಸ್ಸು ಹೆಚ್ಚಾಗುತ್ತದೆಯೇ ಹೊರತು ಕಮ್ಮಿಯಾಗಲ್ಲ. ಇಂಥ ಮಾತುಗಳಿಗೆ ನಾನು ಪ್ರತಿಕ್ರಿಯೇ ನೀಡಲ್ಲ, ದೇವರು ಎಲ್ಲವನ್ನೂ ನೋಡಿಕೊಳ್ಳುತ್ತಾನೆ ಎಂದು ರೇವಣ್ಣ ಹೇಳಿದರು.
ಮಧುಗಿರಿಯ ಕಾಂಗ್ರೆಸ್ ಶಾಸಕ ಕೆ ಎನ್ ರಾಜಣ್ಣ (KN Rajanna) ಅವರು ನಾಡಿನ ಅತ್ಯಂತ ಹಿರಿಯ ರಾಜಕಾರಣಿ ಹೆಚ್ ಡಿ ದೇವೇಗೌಡರ (HD Devegowda) ಬಗ್ಗೆ ಹಗುರವಾಗಿ, ಕೇವಲವಾಗಿ ಮತ್ತು ಅಸಂಭದ್ಧವಾಗಿ ಮಾತಾಡಿ ಟೀಕೆಗೆ ಗುರಿಯಾಗುತ್ತಿದ್ದಾರೆ. ಗೌಡರು ಈಗ ಇಬ್ಬರ ಹೆಗಲ ಮೇಲೆ ಕೈಹಾಕಿ ನಡೆಯುತ್ತಿದ್ದಾರೆ, ನಾಲ್ಕು ಜನರು ಎತ್ತಿಕೊಂಡು ದಿನ ದೂರವಿಲ್ಲ ಎಂದು ರಾಜಣ್ಣ ಹೇಳಿದ್ದಾರೆ. ಹಾಸನದಲ್ಲಿ ರಾಜಣ್ಣ ಮಾತಿಗೆ ಪ್ರತಿಕ್ರಿಯಿಸಿ ಹೆಚ್ ಡಿ ರೇವಣ್ಣ (HD Revanna) ಇಂಥವರಿಂದಲೇ ಕಾಂಗ್ರೆಸ್ ಹಾಳಾಗುತ್ತಿದೆ. ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಕೆಲವು ಇಲಾಖೆಗಳನ್ನು ಕಾಂಗ್ರೆಸ್ ನವರೇ ನಡೆಸುತ್ತಿದ್ದಾರೆ. ರಾಜಣ್ಣನ ಮಾತಿನಿಂದ ದೇವೇಗೌಡರ ಆಯಸ್ಸು ಹೆಚ್ಚಾಗುತ್ತದೆಯೇ ಹೊರತು ಕಮ್ಮಿಯಾಗಲ್ಲ. ಇಂಥ ಮಾತುಗಳಿಗೆ ನಾನು ಪ್ರತಿಕ್ರಿಯೇ ನೀಡಲ್ಲ, ದೇವರು ಎಲ್ಲವನ್ನೂ ನೋಡಿಕೊಳ್ಳುತ್ತಾನೆ ಎಂದು ರೇವಣ್ಣ ಹೇಳಿದರು.
ಇದನ್ನೂ ಓದಿ: Viral Video: ಈ ಶ್ವಾನಕ್ಕೆ ಮನೆಯಲ್ಲಿ ಸ್ನಾನ ಮಾಡುವುದೆಂದರೆ ಬಹಳ ದುಃಖ, ಆದರೆ…