Karnataka Assembly Polls; ನನ್ನ ಮನೆಯಿಂದ ಹೊರಬಿದ್ದ ಬಳಿಕ ಬೇರೆಯವರ ಮನೆಬಾಗಿಲು ತಟ್ಟುತ್ತೇನೆ: ಲಕ್ಷ್ಮಣ ಸವದಿ

Karnataka Assembly Polls; ನನ್ನ ಮನೆಯಿಂದ ಹೊರಬಿದ್ದ ಬಳಿಕ ಬೇರೆಯವರ ಮನೆಬಾಗಿಲು ತಟ್ಟುತ್ತೇನೆ: ಲಕ್ಷ್ಮಣ ಸವದಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 14, 2023 | 11:27 AM

ತಮ್ಮೊಂದಿಗೆ ಬಂದಿರುವ ಚನ್ನರಾಜ ಹಟ್ಟಿಹೊಳಿ; ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯರನ್ನು ಭೇಟಿಯಾಗುವಂತೆ ಹೇಳುತ್ತಿದ್ದಾರೆ, ಎಂದು ಸವದಿ ಹೇಳಿದರು.

ಬೆಂಗಳೂರು: ಲಕ್ಷ್ಮಣ ಸವದಿ (Laxman Savadi) ಬೆಳಗಾವಿಯಿಂದ ಬೆಂಗಳೂರಿಗೆ ಆಗಮಿಸಿದ ಬಳಿಕ ಟಿವಿ9 ಕನ್ನಡ ವಾಹಿನಿಯ ಪ್ರತಿನಿಧಿ ಅವರನ್ನು ಮಾತಾಡಿಸಿ ರಾಜಧಾನಿಗೆ ಬಂದಿರುವ ಉದ್ದೇಶದ ಬಗ್ಗೆ ಕೇಳಿದ್ದಾರೆ. ವಿಧಾನ ಪರಿಷತ್ ಸಭಾಪತಿಗಳನ್ನು ಭೇಟಿಯಾಗಿ ಮೇಲ್ಮನೆ ಸದಸ್ಯನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದು ತನ್ನ ಮೊದಲ ಕೆಲಸವಾಗಿದೆ ಎಂದು ಸವದಿ ಹೇಳಿದರು. ಅದಾದ ಮೇಲೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಪತ್ರವನ್ನೂ ರವಾನಿಸುವುದಾಗಿ ಹೇಳುತ್ತಾರೆ. ಡಿಕೆ ಶಿವಕುಮಾರ್ (DK Shivakumar) ಮತ್ತು ಸಿದ್ದರಾಮಯ್ಯರನ್ನು (Siddaramaiah) ಭೇಟಿಯಾಗುವ ಬಗ್ಗೆ ಕೇಳಿದಾಗ, ಮೊದಲು ನನ್ನ ಮನೆಯಿಂದ ಹೊರಬಿದ್ದು ಬೇರೆಯವರ ಮನೆ ಬಾಗಿಲು ತಟ್ಟುತ್ತೇನೆ, ತಮ್ಮೊಂದಿಗೆ ಬಂದಿರುವ ಚನ್ನರಾಜ ಹಟ್ಟಿಹೊಳಿ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುವಂತೆ ಹೇಳುತ್ತಿದ್ದಾರೆ, ಎಂದು ಸವದಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ