My India My Life Goals: ಶಬ್ದ ಮಾಲಿನ್ಯ ಪರಿಸರಕ್ಕೆ ಮಾತ್ರವಲ್ಲ, ನಮ್ಮ ಮಾನಸಿಕ ಒತ್ತಡಕ್ಕೂ ಕೆಟ್ಟ ಪರಿಣಾಮ ಉಂಟು ಮಾಡುತ್ತದೆ
ಶಬ್ದ ಮಾಲಿನ್ಯವನ್ನು ನಿಯಂತ್ರಣದಲ್ಲಿಡುವುದು ನಮ್ಮೆಲ್ಲರ ಗುರಿಯಾಗಬೇಕು. ಶಬ್ದ ಮಾಲಿನ್ಯವು ನಮ್ಮ ಪರಿಸರ ಮೇಲೆ ದೊಡ್ಡ ಮಟ್ಟದ ಪರಿಣಾಮವನ್ನು ಉಂಟು ಮಾಡುತ್ತದೆ.
ಶಬ್ದ ಮಾಲಿನ್ಯವನ್ನು ನಿಯಂತ್ರಣದಲ್ಲಿಡುವುದು ನಮ್ಮೆಲ್ಲರ ಗುರಿಯಾಗಬೇಕು. ಶಬ್ದ ಮಾಲಿನ್ಯವು ನಮ್ಮ ಪರಿಸರ ಮೇಲೆ ದೊಡ್ಡ ಮಟ್ಟದ ಪರಿಣಾಮವನ್ನು ಉಂಟು ಮಾಡುತ್ತದೆ. ಅದಕ್ಕಾಗಿ ಇದನ್ನು ನಿಯಂತ್ರಿಸುವುದು ಮುಖ್ಯ. ಈ ಶಬ್ದ ಮಾಲಿನ್ಯ ಪರಿಸರ ಮೇಲೆ ಮಾತ್ರವಲ್ಲದೆ ನಮ್ಮ ಮಾನಸಿಕ ಒತ್ತಡದ ಮೇಲೆಯು ಪರಿಣಾಮವನ್ನು ಉಂಟು ಮಾಡುತ್ತದೆ. ಇದಕ್ಕೆ ಉದಾಹರಣೆ, ಟ್ರಾಫಿಕ್ನಲ್ಲಿ ವಾಹನಗಳ ಶಬ್ದ. ಇದು ನಮ್ಮ ಮಾನಸಿಕ ಸ್ಥಿತಿಯನ್ನು ಕುಂಠಿತ ಮಾಡುತ್ತದೆ. ಜತೆಗೆ ನಿದ್ರೆಗೂ ತೊಂದರೆಯನ್ನು ಉಂಟು ಮಾಡುತ್ತದೆ. ಈ ಶಬ್ದ ಮಾಲಿನ್ಯದಿಂದ ಕಿವುಡುತನದಂತಹ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಶಬ್ದ ಮಾಲಿನ್ಯವು ಮಕ್ಕಳು ಮತ್ತು ವೃದ್ಧರಿಗೆ ಅತ್ಯಂತ ಹಾನಿಕಾರಕ. ಕರ್ಕಶವಾದ ಹಾರ್ನ್ ಹಾಕಿಕೊಂಡು ವಾಹನಗಳನ್ನು ಓಡಿಸಬಾರದು ಧ್ವನಿವರ್ಧಕಗಳನ್ನು ಮಿತಿವಾಗಿ ಬಳಸುವುದು ಉತ್ತಮ. ಶಬ್ದ ಮಾಲಿನ್ಯ ಜನರ ಮೇಲೆ ಮತ್ತು ಪರಿಸರದ ಮೇಲೆ ಯಾವೆಲ್ಲ ಪರಿಣಾಮವನ್ನು ಉಂಟು ಮಾಡುತ್ತದೆ, ಶಬ್ದ ಮಾಲಿನ್ಯದಿಂದ ನಮ್ಮ ಪರಿಸರವನ್ನು ರಕ್ಷಣೆ ಮಾಡುವುದು ಹೇಗೆ ಎಂಬ ಬಗ್ಗೆ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ನನ್ನ ಭಾರತ ನನ್ನ ಜೀವನದ ಗುರಿ ಅಭಿಯಾನ ನಡೆಸುತ್ತಿದೆ. ಇದಕ್ಕೆ ಟಿವಿ9 ಮಹತ್ವದ ಬೆಂಬಲವನ್ನು ನೀಡಿದೆ.