My India My Life Goals: ಸಮುದ್ರ ತೀರ ಮತ್ತು ಉದ್ಯಾನವನಗಳನ್ನು ಸ್ವಚ್ಛಗೊಳಿಸಿ ಸ್ವಚ್ಛತಾ ಅಭಿಯಾನದ ಅರಿವು ಬೇರೆಯವರಲ್ಲೂ ಮೂಡಿಸಬೇಕಿದೆ!
ಈ ಕಾರ್ಯದಲ್ಲಿ ನಾವು ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ನೆರವು ಪಡೆದುಕೊಳ್ಳಬಹುದಾಗಿದೆ. ಸ್ವಚ್ಛತಾ ಅಭಿಯಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ನಾವು ಮಾಡಬೇಕಿದೆ.
ಬೆಂಗಳೂರು: ರಜೆ ಕಳೆಯಲು ಬೀಚ್ ಇಲ್ಲವೇ ಸಮುದ್ರತೀರಗಳಿಗೆ (seashore) ಹೋಗುವುದನ್ನು ಬಹಳಷ್ಟುಜನ ಮಾಡುತ್ತೇವೆ. ತೀರದಲ್ಲಿ ಕೂತು ತಿಂಡಿ ಪದಾರ್ಥಗಳನ್ನು ತಿನ್ನುತ್ತೇವೆ ಮತ್ತು ನೀರು ಕುಡಿಯುತ್ತೇವೆ. ಆದರೆ ತ್ಯಾಜ್ಯವನ್ನು (waste) ಅಲ್ಲೇ ಬಿಸಾಡುತ್ತೇವೆ. ಇದು ನಮ್ಮ ಪರಿಸರದ (environment) ಮೇಲೆ, ಗಂಭೀರ ಸ್ವರೂಪದ ದುಷ್ಪರಿಣಾಮಗಳನ್ನು ಬೀರುತ್ತದೆ. ಹಾಗಾಗೇ, ಸಮುದ್ರ ತೀರ, ಬೀಚ್ ಗಳನ್ನು ಮತ್ತು ಉದ್ಯಾನವನಗಳನ್ನು ಸ್ವಚ್ಛವಾಗಿಡೋದು ನಮ್ಮೆಲ್ಲರ ಕರ್ತವ್ಯವಾಗಿದೆ. ಸ್ನೇಹಿತರೊಂದಿಗೆ ಮತ್ತು ಸಮುದಾಯಗಳನ್ನು ಒಗ್ಗೂಡಿಸಿ ಸಮುದ್ರ ತೀರಗಳನ್ನು ಸ್ವಚ್ಛಗೊಲಿಸುವ, ಸುಂದರಗೊಳಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು. ಶ್ರಮದಾನದ ಸರಿಯಾದ ವ್ಯಾಖ್ಯಾನ ಇದೇ. ತೀರದಲ್ಲಿ ಬಿದ್ದಿರುವ ಗಾಜು, ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಸ್ವಚ್ಛಗೊಳಿಸಿದರೆ ಕರಾವಳಿ ತೀರ ಪಡೆದುಕೊಳ್ಳುವ ಸೌಂದರ್ಯ ಪದಗಳಲ್ಲಿ ವರ್ಣಿಸಲಾಗುವುದು. ಈ ಕಾರ್ಯದಲ್ಲಿ ನಾವು ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ನೆರವು ಪಡೆದುಕೊಳ್ಳಬಹುದಾಗಿದೆ. ಸ್ವಚ್ಛತಾ ಅಭಿಯಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ನಾವು ಮಾಡಬೇಕಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ