ನನ್ನ ಮಗ ಒಳ್ಳೆಯ ಸ್ವಬಾವದವನಾಗಿದ್ದ, ಯಾರೊಂದಿಗೂ ಅವನಿಗೆ ವೈರತ್ವ ಇರಲಿಲ್ಲ: ಚಂದ್ರಶೇಖರ್ ತಾಯಿ
ಚಂದ್ರಶೇಖರ್ ತಾಯಿ ಅಪಾರ ಸಂಕಟದಲ್ಲಿದ್ದರೂ ಮಗನ ಅಭಿರುಚಿ, ಹವ್ಯಾಸ, ಸ್ವಭಾವ, ಗುರೂಜಿಯೊಬ್ಬರೊಂದಿಗಿನ ಒಡನಾಟ, ಭವಿಷ್ಯದ ಬಗ್ಗೆ ಕಂಡಿದ್ದ ಕನಸು ಮತ್ತು ತಮ್ಮೊಂದಿಗೆ ಕೊನೆಯ ಬಾರಿಗೆ ಮಾತಾಡಿದ್ದನ್ನು ಹೇಳಿಕೊಂಡಿದ್ದಾರೆ.
ದಾವಣಗೆರೆ: ಬಿಜೆಪಿ ಧುರೀಣ ಎಮ್ ಪಿ ರೇಣುಕಾಚಾರ್ಯ (MP Renukacharya) ಸಹೋದರ ಎಮ್ ಪಿ ರಮೇಶ್ (MP Ramesh) ಅವರ ಪುತ್ರ ಚಂದ್ರಶೇಖರ ಸಾವು ತಂದೆ-ತಾಯಿಗಳಿಗೆ ಜೀವನವಿಡೀ ಕಾಡುವ ನೋವು ಮತ್ತು ಯಾತನೆ. ಶಿವಮೊಗ್ಗದಲ್ಲಿ ಇಂಜಿನೀಯರಿಂಗ್ (engineering) ವ್ಯಾಸಂಗ ಮಾಡಿ ಅವರ ತಂದೆಯೊಂದಿಗೆ ವ್ಯಾಪಾರ ನೋಡಿಕೊಳ್ಳುತ್ತಿದ್ದ ಚಂದ್ರಶೇಖರ್ ತಾಯಿಯವರು ಅಪಾರ ಸಂಕಟದಲ್ಲಿದ್ದರೂ ತಮ್ಮ ಮಗನ ಅಭಿರುಚಿ, ಹವ್ಯಾಸ, ಸ್ವಭಾವ, ಗುರೂಜಿಯೊಬ್ಬರೊಂದಿಗಿನ ಒಡನಾಟ, ಭವಿಷ್ಯದ ಬಗ್ಗೆ ಕಂಡಿದ್ದ ಕನಸು ಮತ್ತು ತಮ್ಮೊಂದಿಗೆ ಕೊನೆಯ ಬಾರಿಗೆ ಮಾತಾಡಿದ್ದನ್ನು ಹೇಳಿಕೊಂಡಿದ್ದಾರೆ. ಅವರ ಸ್ಥಿತಿಯನ್ನು ನೋಡಲಾಗದು ಮಾರಾಯ್ರೇ.